Connect with us

    DAKSHINA KANNADA

    ಕೇರಳದ ಉದ್ಯಮಿಯ ಮನೆಗೆ ದಾಳಿ ಮಾಡಿದ ಕರ್ನಾಟಕದ ನಕಲಿ ವಿಧಾನ ಪರಿಷತ್ ಸದಸ್ಯನ ಸೆರೆ.

    ಮಲಪ್ಪುರಂ  ಜುಲೈ:-26  ಕರ್ನಾಟಕದ ಅಲ್ಪಸಂಖ್ಯಾತ ಯುವ ಮೋರ್ಚಾ ನೇತಾರನೋರ್ವ ತನ್ನ ಕಾರಿಗೆ ಕರ್ನಾಟಕದ ವಿಧಾನ ಪರಿಷತ್ ಸದಸ್ಯನೆಂಬ ನಕಲಿ ಬೋರ್ಡ್ ಸ್ಥಾಪಿಸಿ ತನ್ನ ಗೂಂಡಾ ಪಡೆಗಳೊಂದಿಗೆ ಕೇರಳದ ಅನಿವಾಸಿ ಉದ್ಯಮಿಯೋರ್ವರ ಮನೆಗೆ ದಾಳಿ ನಡೆಸಿದ್ದು, ನಾಗರಿಕರು ಬಂಧಿಸಿ ಪೋಲಿಸರಿಗೊಪ್ಪಿಸಿದ್ದಾರೆ. ಮೂಲತ: ಕಾಸರಗೋಡಿನ ತಳಂಗರೆಯವನಾದ, ಅಲ್ಪಸಂಖ್ಯಾತ ಯುವಮೋರ್ಚಾ ಅಖಿಲಭಾರತ ಉಪಾಧ್ಯಕ್ಷ ಅಸ್ಲಂ ಗುರುಕ್ಕಲ್(40) ,ತನ್ನ ಸಹಚರರೊಂದಿಗೆ , ಕರ್ನಾಟಕದ ವಿಧಾನಪರಿಷತ್ ಸದಸ್ಯ ಎಂಬ ನಕಲಿ ಬೋರ್ಡ್ ತನ್ನ ಕಾರಿಗೆ ಅಳವಡಿಸಿ ಕೇರಳದ ಅನಿವಾಸಿ ಉದ್ಯಮಿ ಕೆ.ಟಿ.ರಬಿವುಲ್ಲಾ ರವರ ಮಲಪ್ಪುರಂನಲ್ಲಿರುವ ಮನೆಗೆ ದಾಳಿ ಮಾಡಿದ್ದಾನೆ, ಈ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಆತನ್ನು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಈತನ ಜೊತೆಗಿದ್ದ ಈತನ ಅಂಗರಕ್ಷಕನ ಸಹಿತ 9 ಮಂದಿಯನ್ನು ನ್ಯಾಯಾಂಗ ಬಂಧನಗೊಳಪಡಿಸಲಾಗಿದೆ.
    ಕಾಸರಗೋಡು ಮೂಲದ ಉದ್ಯಮಿಯೋರ್ವನಿಂದ ಕೊಟೇಶನ್ ಪಡೆದ ಬಿಜೆಪಿ ಮುಖಂಡ ಅಸ್ಲಂ ಗುರುಕ್ಕಳ್ ಉದ್ಯಮಿ ರಬೀವುಲ್ಲಾರನ್ನು ಅಪಹರಿಸುವ ಯೋಜನೆ ಹಾಕಿಕೊಂಡಿದ್ದನು. ಅದರಂತೆ ವಿಧಾನಪರಿಷತ್ ಸದಸ್ಯನೆಂಬ ನಕಲಿ ವೇಷ ಧರಿಸಿ ಈ ಕೃತ್ಯಕ್ಕೆ ಕೈ ಹಾಕಿದ್ದನು.

    ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಆಪ್ತ.
    ಉದ್ಯಮಿಯನ್ನು ಅಪಹರಿಸಲು ಯತ್ನಿಸಿ ಇದೀಗ ಕೇರಳದಲ್ಲಿ ಕಂಬಿ ಎಣಿಸುತ್ತಿರುವ ಅಸ್ಲಂ ಗುರುಕ್ಕಲ್ ಯಡಿಯೂರಪ್ಪರ ಆಪ್ತನಾಗಿದ್ದಾನೆ. ಬಿಜೆಪಿಯ ರಾಷ್ಟ್ರ ಮಟ್ಟದ ನೇತಾರರ ಜೊತೆ ಸಂಪರ್ಕ ಹೊಂದಿರುವ ಈತ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡಿನಿಂದ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದ. ನರೇಂದ್ರ ಮೋದಿ, ರಾಷ್ಟ್ರಪತಿ ಕೋವಿಂದ್ , ಅಮಿತ್ ಶಾ ಜೊತೆ ನಿಂತು ಫೋಟೋ ಕ್ಲಿಕ್ಕಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದ ಅಸ್ಲಂ ಗುರುಕ್ಕಲ್ ಬಿಜೆಪಿ ರಾಷ್ಟ್ರ ಮಟ್ಟದ ಮುಖಂಡನಾಗಿ, ಕುಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಬೆಂಗಳೂರಿನಲ್ಲಿ ಕಛೇರಿ ಹಾಗೂ ಮನೆಯನ್ನು ಹೊಂದಿರುವ ಅಸ್ಲಂ ಕೇವಲ ಬಿಜೆಪಿ ಲೇಬಲ್ ನಲ್ಲಿ ಕೋಟ್ಯಾಧೀಶನಾಗಿದ್ದು, ಯಡಿಯೂರಪ್ಪರವರ ಬಲಗೈ ಬಂಟನಾಗಿದ್ದ..

    Share Information
    Advertisement
    Click to comment

    You must be logged in to post a comment Login

    Leave a Reply