LATEST NEWS
ಬಿಜೆಪಿಯಿಂದ ಡಿವೈಡ್ ಆ್ಯಂಡ್ ರೂಲ್ – ಪ್ರಿಯಾಂಕ ಚತುರ್ವೆದಿ

ಬಿಜೆಪಿಯಿಂದ ಡಿವೈಡ್ ಆ್ಯಂಡ್ ರೂಲ್ – ಪ್ರಿಯಾಂಕ ಚತುರ್ವೆದಿ
ಮಂಗಳೂರು ಮಾರ್ಚ್ 29: ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಜನರಲ್ಲಿ ದ್ವೇಷವನ್ನು ಮೂಡಿಸಿ, ಡಿವೈಡ್ ಆ್ಯಂಡ್ ರೂಲ್ ಮಾಡುತ್ತಿದೆ ಎಂದು ಎಐಸಿಸಿ ಸಂವಹನ ವಿಭಾಗದ ಸಂಯೋಜಕಿ ಪ್ರಿಯಾಂಕ ಚತುರ್ವೇದಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ದೃಷ್ಠಿಯಿಂದ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಈ ಜಿಲ್ಲೆಯನ್ನು ಭೇಟಿಯಾಗುತ್ತಿದ್ದಾರೆ. ಆದರೆ, ಮೋದಿಯವರ ಮುಂದೆ ನನ್ನದು ಮೂರು ಪ್ರಶ್ನೆಗಳಿವೆ ಎಂದು ಹೇಳಿದ ಅವರು ರಾಜ್ಯ ಸಭಾ ಪ್ರತಿನಿಧಿಗಳಾಗಿ ಕರ್ನಾಟಕದಿಂದ ಕರ್ನಾಟಕಕೇತರರನ್ನು ಹಲವು ಬಾರಿ ಆಯ್ಕೆ ಮಾಡಿದ್ದಾರೆ. ಕನ್ನಡಿಗರಿಗೆ ಉಂಟಾಗುವ ಸಮಸ್ಯೆಗಳಿಗೆ ಕರ್ನಾಟಕೇತರರು ಧ್ವನಿ ಎತ್ತುತ್ತಾರಾ? ಎಂದು ಪ್ರಶ್ನಿಸಿದರು.

ಮಹಾದಾಯಿ ವಿಚಾರ ಕರ್ನಾಟಕದ ಜನರ ಅಳಿವು ಉಳಿವಿನ ವಿಷಯವಾಗಿದೆ. ಆದರೆ, ಮಹಾದಾಯಿ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಯಾಕೆ ತುಟಿಪಿಟಿಕ್ ಅನ್ನುತ್ತಿಲ್ಲ ? ಎಂದು ಪ್ರಶ್ನಿಸಿದ ಅವರು ಮಹಾದಾಯಿ ವಿಚಾರ ಸಂಬಂಧಿಸಿ ಕಾಂಗ್ರೆಸ್ ಎಂದಿಗೂ ರಾಜಕೀಯ ಮಾಡಿಲ್ಲ ಎಂದರು. ಗೋವಾ ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ರಾಜ್ಯದ ಸಿಎಂರನ್ನು ಪರಿಗಣಿಸದೆ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡಿದ್ದಾರೆ. ಮಹಾದಾಯಿ ವಿಚಾರದಲ್ಲಿ ಸರಿಯಾದ ನಿರ್ಧಾರ ಕೈಗೊಂಡು ಪರಿಹರಿಸಬೇಕು ಎಂದು ಹೇಳಿದ ಅವರು ಇವುಗಳಲ್ಲಿ ರಾಜಕೀಯ ಮಾಡಬಾರದು ಎಂದರು.