Connect with us

    DAKSHINA KANNADA

    ಐದು ವರ್ಷದಲ್ಲೇ ಶಾಸಕರ ಆಸ್ತಿಯಾಯಿತು ದುಪ್ಪಟ್ಟು, ಬಿಜೆಪಿಯಿಂದ ತಂತ್ರ ಬಹಿರಂಗಕ್ಕೆ ಪಟ್ಟು

    ಐದು ವರ್ಷದಲ್ಲೇ ಶಾಸಕರ ಆಸ್ತಿಯಾಯಿತು ದುಪ್ಪಟ್ಟು, ಬಿಜೆಪಿಯಿಂದ ತಂತ್ರ ಬಹಿರಂಗಕ್ಕೆ ಪಟ್ಟು

    ಪುತ್ತೂರು, ಮೇ 9: 5 ವರ್ಷಗಳ ಹಿಂದೆ ಬಾಡಿಗೆ ಮನೆ ಹುಡುಕುತ್ತಿದ್ದ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಇದೀಗ ದಿಢೀರನೇ ಕೋಟ್ಯಾಧಿಪತಿ ಆಗಿರುವ ಹಿಂದಿನ ತಂತ್ರವನ್ನು ಪುತ್ತೂರಿನ ಬಡ ಜನತೆಗೂ ತಿಳಿಸಬೇಕೆಂದು ಪುತ್ತೂರು ಬಿಜೆಪಿ ಘಟಕ ಆಗ್ರಹಿಸಿದೆ.

    ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಶಕುಂತಲಾ ಶೆಟ್ಟಿಯವರು ತಾವು ಶಾಸಕರಾಗಿ ಆಯ್ಕೆಯಾದ ಬಳಿಕ ಯಾವುದೇ ಭ್ರಷ್ಟಾಚಾರ ನಡೆಸದೆ, ಪ್ರಾಮಾಣಿಕವಾಗಿ ಜನಸೇವೆ ಮಾಡಿರುವುದಾಗಿ ಪುತ್ತೂರು ಶಾಸಕಿಯವರಾದ ಶಕುಂತಲಾ ಶೆಟ್ಟಿ ಹಾಗೂ ಅವರ ಸಹಚರರು ಎಲ್ಲಾ ಕಡೆಗಳಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ.

    ಆದರೆ ಶಾಸಕಿಯಾದ ಬಳಿಕ ತನ್ನ ಆಸ್ತಿಯನ್ನು ಐದಾರು ಪಟ್ಟು ಹೆಚ್ಚಿಸಿಕೊಂಡಿರುವ ಶಾಸಕಿಯವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಎನ್ನುವುದನ್ನು ಶಾಸಕಿಯವರು ಪುತ್ತೂರಿನ ಬಡ ಜನತೆಯ ಮುಂದೆ ಹೇಳಬೇಕಿದೆ ಎಂದು ಒತ್ತಾಯಿಸಿದರು.

    ಜಿಲ್ಲೆಯ ಹಲವು ಬ್ಯಾಂಕುಗಳಲ್ಲಿ ಲಕ್ಷಾಂತರ ರೂಪಾಯಿ ಡೆಪೋಸಿಟ್ ಹೊಂದಿರುವ ಇವರ ಖಾತೆಯಲ್ಲಿ 5 ವರ್ಷಗಳ ಹಿಂದೆ ಅಂದರೆ 2013 ರಲ್ಲಿ ಇದ್ದ ಹಣಕ್ಕಿಂತ ಹತ್ತು ಪಟ್ಟು ಜಾಸ್ತಿ ಹಣ ಸಂದಾಯವಾದ ತಂತ್ರವೇನು ಎನ್ನುವುದನ್ನು ಜನತೆಯ ಮುಂದೆ ತಿಳಿಸಬೇಕೆಂದರು.

    5 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಬಾಡಿಗೆ ಮನೆಯನ್ನು ಹುಡುಕುತ್ತಿದ್ದ ಶಾಸಕರು ಇದೀಗ ಕೋಟ್ಯಾಧಿಪತಿಗಳಾದ ಪ್ರಾಮಾಣಿಕ ತಂತ್ರವನ್ನು ಜನತೆಗೆ ತಿಳಿಸಬೇಕೆಂದು ಅವರು ಹೇಳಿದರು.

    2013 ರಲ್ಲಿ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್ ನಲ್ಲಿ ಶಕುಂತಲಾ ಶೆಟ್ಟಿಯವರ ಠೇವಣಿಯಲ್ಲಿ ಇದ್ದ ಮೊತ್ತ 3,39,195 ಅದೇ 2018 ರ ಮೊತ್ತ 21,95,315 ರೂಪಾಯಿಗೆ ಏರಿದೆ.

    2013 ರಲ್ಲಿ ಅಲಂಕಾರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಇದ್ದ ಠೇವಣಿ ಮೊತ್ತ 1.13,163 ರೂಪಾಯಿ. ಅದೇ 2018 ರ ವೇಳೆಗೆ 9,60,749 ರೂಪಾಯಿಗೆ ಏರಿದೆ.

    2013 ರಲ್ಲಿ ಅಲಂಕಾರು ಸಿ.ಎ. ಬ್ಯಾಂಕ್ ನಲ್ಲಿದ್ದ ಠೇವಣಿ ಮೊತ್ತ 3,84,548 ಅದೇ 2018 ಕ್ಕೆ 15,20,455 ರೂಪಾಯಿಯಾಗಿದೆ.

    ಪುತ್ತೂರು ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದದಲ್ಲಿ ಇದ್ದ ಠೇವಣಿ ಮೊತ್ತ 62,400 ಇದೀಗ 3,72,073 ಕ್ಕೆ ಏರಿದೆ.

    ಕರ್ನಾಟಕ ಬ್ಯಾಂಕ್ ಪುತ್ತೂರು ಶಾಖೆಯಲ್ಲಿದ್ದ ಠೇವಣಿ ಮೊತ್ತ 5400 ರೂಪಾಯಿ ಇದೀಗ 6,39,305 ರೂಪಾಯಿಗೆ ಏರಿದೆ.

    ಎಸ್.ಬಿ.ಎಂ ಪುತ್ತೂರು ಶಾಖೆಯಲ್ಲಿದ್ದ ಠೇವಣಿ ಮೊತ್ತ 1,09,831 ರೂಪಾಯಿ ಇದೀಗ 10,85,173 ರೂಪಾಯಿಗೆ ಏರಿದೆ.

    ಅಲ್ಲದೆ 2013 ರಲ್ಲಿ 600 ಗ್ರಾಂ ಇದ್ದ ಚಿನ್ನ 700 ಗ್ರಾಂ ಚಿನ್ನಕ್ಕೆ ಮುಟ್ಟಿದೆ.

    ಅಲ್ಲದೆ ಪುತ್ತೂರು , ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಆಸ್ತಿಯನ್ನೂ ಮಾಡಿಕೊಂಡಿದ್ದು, ಇದೆಲ್ಲಾ ಐದು ವರ್ಷದಲ್ಲಿ ಹೇಗಾಯಿತು ಎನ್ನುವ ತಂತ್ರವನ್ನು ಬಹಿರಂಗಪಡಿಸಿ ಎಂದು ಅವರು ಆಗ್ರಹಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply