DAKSHINA KANNADA
ಕಾಂಗ್ರೇಸ್ ನ ತುಷ್ಟೀಕರಣದ ಪರಮಾವಧಿಯಾದ ವಕ್ಫ್ ಕಾಯ್ದೆಯ ವಿರುದ್ಧ ಬಿಜೆಪಿ ದ.ಕ. ಸಮಿತಿ ತೀವ್ರ ಅಸಮಾಧಾನ

ಮಂಗಳೂರು : ಕಾಂಗ್ರೇಸ್ ನ ತುಷ್ಟೀಕರಣದ ಪರಮಾವಧಿಯಾದ ವಕ್ಫ್ ಕಾಯ್ದೆಯ ವಿರುದ್ಧ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಕಾಂಗ್ರೇಸ್ಸಿನ ತುಷ್ಟೀಕರಣದ ಪರಮಾವಧಿಯಿಂದ 2013 ರಲ್ಲಿ ಮಾಡಲಾದ ವಕ್ಫ್ ಕಾಯ್ದೆಯ ತಿದ್ದುಪಡಿಯಿಂದ ದೇಶದಲ್ಲಿ ಎಲ್ಲೂ ಯಾವ ಇಲಾಖೆಯಲ್ಲೂ ಕಾಣಲು ಸಿಗದ ಹಾಗೂ ದೇಶದ ಭೂ ಭಾಗವನ್ನು ಮನಸೋ ಇಚ್ಚೆ ಲೂಟಿ ಹೊಡೆಯುದಕ್ಕೆ ಅವಕಾಶ ಕೊಡುವಂತಹ ಕಾಯ್ದೆಯನ್ನು ತನ್ನ ಓಟ್ ಬ್ಯಾಂಕಿಗಾಗಿ ರಚಿಸಲಾಗಿತ್ತು.
ಇದೀಗ ಆ ಕಾಯಿದೆಗೆ ತಿದ್ದುಪಡಿ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಕೇಂದ್ರ ಸರಕಾರ ಜೆಪಿಸಿ ಯನ್ನು ರಚಿಸಿದ್ದು ಶ್ಲಾಘನೀಯ ವಿಚಾರವಾಗಿದೆ. ಆದರೆ ಕಾಂಗ್ರೇಸ್ ತಮ್ಮ ಸಂಗಡಿಗರೊಂದಿಗೆ ಹಳೆಯ ಚಾಳಿಯನ್ನು ತೋರಿಸಿದೆ. ತಲತಲಾಂತರದಿಂದ ಬೇಸಾಯ ಮಾಡಿಕೊಂಡು ಬಂದಂತಹ ಬಡ ರೈತರ ಸಾವಿರಾರು ಎಕರೆ ಭೂಮಿಯನ್ನು ವಕ್ಫ್ ಗೆ ಕೊಡಿಸಿ, ಆ ಮೂಲಕ ಮುಸಲ್ಮಾನರನ್ನು ಖುಷಿಪಡಿಸಿ ಈ ಚುನಾವಣೆಯ ಸಂಧರ್ಭದಲ್ಲಿ ಓಲೈಕೆ ರಾಜಕಾರಣ ಮಾಡುವ ಹುನ್ನಾರವನ್ನು ಮಾಡಿದೆ. ಇವರಿಗೆ ಕರ್ನಾಟಕದಲ್ಲಿ ಅಧಿಕಾರ ನಡೆಸಲು ಅನುವು ಮಾಡಿಕೊಟ್ಟ ಪ್ರಜೆಗಳು ಪ್ರತಿದಿನ ಹಿಡಿಶಾಪ ಹಾಕುವಂತೆ ಮಾಡಿದ್ದಾರೆ. ಬಡ ರೈತರಿಗೆ ಭೂಮಿಯನ್ನು ವಕ್ಫಗೆ ನೀಡುವಂತೆ ನೋಟೀಸ್ ಅನ್ನು ನೀಡಲಾಗಿದೆ. ಹೀಗೆ ಅನೇಕ ಪ್ರಕರಣಗಳಲ್ಲಿ ಜನ ಸಾಮಾನ್ಯರು, ಕಾಂಗ್ರೇಸ್ ಈ ಹಿಂದೆ ತುಷ್ಟೀಕರಣಕ್ಕಾಗಿ ಮಾಡಿದ ವಕ್ಫ ಕಾಯಿದೆಯ ವಿಷಫಲವನ್ನು ಉಣ್ಣುವಂತಾಗಿದೆ ಎಂದು ತನ್ನ ಅಸಮಾಧಾನವನ್ನು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
