DAKSHINA KANNADA
ಪುನೀತ್ ರಾಜ್‌ಕುಮಾರ್ ಪುಣ್ಯ ಸ್ಮರಣೆ, ಅಪ್ಪು ನೆನೆದು ಆ್ಯಂಕರ್ ಅನುಶ್ರೀ ಭಾವುಕ ಪೋಸ್ಟ್..!!
ಕರಾವಳಿಯ ಬೆಡಗಿ ಅನುಶ್ರೀ (anushree) ಅವರು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಕೂಡ ಹೌದು. ಅಪ್ಪು ಅಗಲಿಕೆಯ ನೋವು ಇಂದಿಗೂ ಅವರನ್ನು ಕಾಡುತ್ತಿದೆ. ಇದೀಗ ಅವರು ಬರೆದಿರುವ ಭಾವನ್ಮಾತಕ ಸಾಲುಗಳನ್ನು ನೋಡಿ ಫ್ಯಾನ್ಸ್ ಕೂಡ ಭಾವುಕರಾಗಿದ್ದಾರೆ.
ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಅಗಲಿ ಇಂದಿಗೆ 3 ವರ್ಷಗಳು ಕಳೆದಿವೆ. ಅಪ್ಪು ಅವರ ಪುಣ್ಯಸ್ಮರಣೆಯಂದು ಆ್ಯಂಕರ್ ಅನುಶ್ರೀ (Anushree) ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
“ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ, ನೀವಿಲ್ಲದ ಬದುಕಿಗೆ ಕಳೆ ಇಲ್ಲ ಎಂದು ಅಪ್ಪು ಅವರನ್ನು ಸ್ಮರಿಸಿದ್ದಾರೆ. ನಮ್ಮ ಕಂಗಳ ಬಿಸಿಯ ಹನಿಗಳು ನೂರು ಬಾರಿ ಕೂಗಿವೆ.ನಿಮ್ಮ ನಗುವ ಮೊಗವ ನೋಡಲು ಕೋಟಿ ಕಂಗಳು ಕಾಯುತ್ತಿದೆ. ಮಿಸ್ ಯೂ ಅಪ್ಪು ಸರ್ ಎಂದು ಬರೆದಿದ್ದಾರೆ. ನೀವಿಲ್ಲದೆ ಅಭಿಮಾನ ಇಲ್ಲ. ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ, ನೀವಿಲ್ಲದ ಬದುಕಿಗೆ ಕಳೆ ಇಲ್ಲ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕರಾವಳಿಯ ಬೆಡಗಿ ಅನುಶ್ರೀ ಅವರು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಕೂಡ ಹೌದು. ಅಪ್ಪು ಅಗಲಿಕೆಯ ನೋವು ಇಂದಿಗೂ ಅವರನ್ನು ಕಾಡುತ್ತಿದೆ. ಇದೀಗ ಅವರು ಬರೆದಿರುವ ಭಾವನ್ಮಾತಕ ಸಾಲುಗಳನ್ನು ನೋಡಿ ಫ್ಯಾನ್ಸ್ ಕೂಡ ಭಾವುಕರಾಗಿದ್ದಾರೆ.
You must be logged in to post a comment Login