LATEST NEWS
ಮಂಗಳೂರಿನಲ್ಲಿ ಪ್ರಧಾನಮಂತ್ರಿ ಜೊತೆ ಬಿಜೆಪಿಯ ವಿಜಯೋತ್ಸವ

ಮಂಗಳೂರಿನಲ್ಲಿ ಪ್ರಧಾನಮಂತ್ರಿ ಜೊತೆ ಬಿಜೆಪಿಯ ವಿಜಯೋತ್ಸವ
ಮಂಗಳೂರು ಡಿಸೆಂಬರ್ 18: ಮಂಗಳೂರಿಗೆ ಇಂದು ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆ ಬಿಜೆಪಿಯು ವಿಜಯೋತ್ಸವದ ಸಿದ್ದತೆ ನಡೆಸಿದೆ.
ಒಖಿ ಚಂಡಮಾರುತದಿಂದ ತತ್ತರಿಸಿರುವ ಲಕ್ಷದ್ವೀಪದ ಪ್ರದೇಶಗಳ ವೀಕ್ಷಣೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 19 ರಂದು ಲಕ್ಷದ್ವೀಪಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ 11.30 ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ರಾತ್ರಿ ಮಂಗಳೂರಿನಲ್ಲಿಯೇ ತಂಗಲಿದ್ದಾರೆ.

ಪ್ರಧಾನಿ ಅವರು ತಂಗಲು ನಗರದ ಕದ್ರಿಯ ಸರ್ಕ್ಯೂಟ್ ಹೌಸ್ ನ್ನು ಸಿದ್ದಪಡಿಸಲಾಗಿದೆ . ಪ್ರಧಾನಿ ಅವರು ರಾತ್ರಿ ವಾಸ್ತವ್ಯಕ್ಕಾಗಿ ನಗರದ ಮೂರು ಸ್ಥಳಗಳನ್ನು ಗೊತ್ತುಪಡಿಸಲಾಗಿತ್ತು ಆದರೆ ಭಧ್ರತೆಯ ದೃಷ್ಟಿಯಿಂದ ಸರ್ಕ್ಯೂಟ್ ಹೌಸ್ ನ್ನು ಅಂತಿಮ ಗೊಳಿಸುವ ಸಾಧ್ಯತೆ ಇದೆ. ಸರ್ಕ್ಯೂಟ್ ಹೌಸ್ ನಲ್ಲಿ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಪ್ರಧಾನಿ ಮೋದಿ ಮಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು ಬಿಜೆಪಿ ಮುಖಂಡರು ಹಾಗು ಕಾರ್ಯಕರ್ತರು ಸಜ್ಜಾಗಿದ್ದಾರೆ.
ವಿಮಾನ ನಿಲ್ದಾಣದಿಂದ ಸರ್ಕ್ಯೂಟ್ ಹೌಸ್ ವರೆಗೆ ದಾರಿ ಯುದ್ದಕ್ಕೂ ಜಿಜೆಪಿ ಬಾವುಟ , ಹಾಗು ಬಂಟಿಂಗ್ಸ್ ಗಳು ರಾರಾಜಿಸುತ್ತಿವೆ. ಪ್ರಧಾನಿ ಮೋದಿ ಅವರೊಂದಿಗೆ ಗುಜರಾತ್ ಹಾಗು ಹಿಮಾಚಲ ಪ್ರದೇಶದ ಗೆಲುವಿನ ಸಂಭ್ರಮಾಚರಣೆ ನಡೆಸಲು ಮಂಗಳೂರಿನಲ್ಲಿ ಬಿಜೆಪಿ ಮುಖಂಡರು ಹಾಗು ಕಾರ್ಯಕರ್ತರು ಸಿದ್ದತೆ ನಡೆಸಿದ್ದಾರೆ.
ಈ ನಡುವೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ರಾಜ್ಯ ರಾಜ್ಯ ಖಾತೆ ಸಚಿವ ಪೊನ್ ರಾಧಾಕೃಷ್ಣನ್ ಈಗಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ.
ನಾಳೆ ಡಿಸೆಂಬರ್ 19 ರಂದು ಬೆಳಗ್ಗೆ 6:30 ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ವಾಯು ಪಡೆಯ ಹೆಲಿಕಾಫ್ಟರ್ ಮೂಲಕ ಮೋದಿ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಕೂಡ ಮೋದಿ ಅವರೊಂದಿಗೆ ಲಕ್ಷದ್ವೀಪಕ್ಕೆ ಭೇಟಿ ನೀಡಲಿದ್ದಾರೆ.