LATEST NEWS
ಉಡುಪಿಯ ಜಾಮಿಯಾ ಮಸೀದಿಯಲ್ಲಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್

ಉಡುಪಿಯ ಜಾಮಿಯಾ ಮಸೀದಿಯಲ್ಲಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್
ಉಡುಪಿ ಮೇ 4: ಕರ್ನಾಟಕ ಚುನಾವಣೆ ಹಿನ್ನಲೆಯಲ್ಲಿ ಅಭ್ಯರ್ಥಿಗಳ ಧಾರ್ಮಿಕ ಕೇಂದ್ರಗಳ ಭೇಟಿ ಮುಂದುವರೆದಿದೆ. ಈ ನಡುವೆ ಬಿಜೆಪಿ ಅಭ್ಯರ್ಥಿಯೊಬ್ಬರು ಮಸೀದಿಯಲ್ಲಿ ಮತಯಾಚನೆ ನಡೆಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಉಡುಪಿಯ ಜಾಮಿಯಾ ಮಸೀದಿಯಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರು ಕೇಳಿ ಪ್ರಶ್ನೆಗೆ ಉತ್ತರಿಸಿದ ಅವರು ಈಶ್ವರಪ್ಪ, ಅನಂತಕುಮಾರ್ ಹೆಗ್ಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಮುಸ್ಲಿಮರ ಮತ ಬೇಡ ಅಂತ ನಾನು ಹೇಳಲ್ಲ. ಹಾಗಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ. ಡಾ.ವಿ.ಎಸ್. ಆಚಾರ್ಯ ಕಾಲದಿಂದಲೇ ಉಡುಪಿಯಲ್ಲಿ ಸೌಹಾರ್ದತೆ ಇದೆ. ಇಲ್ಲಿ ಸೌಹಾರ್ಧತೆ ಕೆಡುವಂತಹ ಯಾವುದೇ ವಾತಾವರಣವಿಲ್ಲ. ಉಡುಪಿಯಲ್ಲಿ ಎಲ್ಲಾ ವರ್ಗದ ಜೊತೆ ಮತಯಾಚಿಸುತ್ತೇವೆ . ಮುಂದೆ ಇನ್ನಷ್ಟು ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಮಠಕ್ಕೆ ಭೇಟಿ ನೀಡದೆ ಇರುವುದರ ಹಿಂದೆ ಭದ್ರತಾ ವೈಫಲ್ಯವಿತ್ತು ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಂಸದೆ ಶೋಭಾ ತಪ್ಪಿ ಹೇಳಿಕೆ ನೀಡಿರಬಹುದು, ನೀತಿ ಸಂಹಿತೆಯ ಕಾರಣದಿಂದಲೇ ಮಠಕ್ಕೆ ಭೇಟಿ ನೀಡಿಲ್ಲ ಎಂದರು.