LATEST NEWS
ದೀಪಕ್ ರಾವ್ ಹತ್ಯೆಯ ಹಿಂದೆ ಬಿಜೆಪಿ – ಮೊಯ್ದಿನ್ ಬಾವಾ ಆರೋಪ

ದೀಪಕ್ ರಾವ್ ಹತ್ಯೆಯ ಹಿಂದೆ ಬಿಜೆಪಿ – ಮೊಯ್ದಿನ್ ಬಾವಾ ಆರೋಪ
ಮಂಗಳೂರು ಜನವರಿ 4: ಸುರತ್ಕಲ್ ನಲ್ಲಿ ನಡೆದ ದೀಪಕ್ ರಾವ್ ಹತ್ಯೆಯ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಸ್ಥಳೀಯ ಶಾಸಕ ಮೊಯ್ದಿನ್ ಬಾವಾ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಕ್ ರಾವ್ ಹತ್ಯೆ ಆರೋಪಿಗಳಾದ ಪಿಂಕಿ ನವಾಜ್‍ನ ಸಹೋದರ ಲಾದನ್ ಇಸ್ಮಾಯಿಲ್ ಹಾಗೂ ಆತನ ಅಕ್ಕನ ಗಂಡ ಭಾವ ಕಾಪುವಿನಲ್ಲಿ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹತ್ಯೆ ಘಟನೆಯ ಹಿಂದೆ ಬಿಜೆಪಿಯ ರಾಜಕೀಯ ಕೈವಾಡ ಇದ್ದು ಈ ಬಗ್ಗೆ ಕೂಲಂಕಷ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಯನ್ನು ಕೋರಲಾಗಿದೆ ಎಂದು ಹೇಳಿದರು.

ದೀಪಕ್ ರಾವ್‍ನ ಹತ್ಯೆಗೆ ಕಾರಣರಾದವರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಹೇಳಿದರು. ಈ ಹತ್ಯೆ ಹಾಗೂ ಇರಿತ ಘಟನೆ ಬಗ್ಗೆ ರಕ್ಷಣೆ ನೀಡಲಾಗದಿರುವುದಕ್ಕೆ ಕ್ಷೇತ್ರದ ಜನತೆಯ ಕ್ಷಮೆ ಕೋರುವುದಾಗಿ ಶಾಸಕ ಮೊಯ್ದಿನ್ ಬಾವಾ ಹೇಳಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್ ರಾವ್ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ 5 ಲಕ್ಷ ಮೊತ್ತ ಪರಿಹಾರವನ್ನು ಶಾಸಕ ಮೊಯ್ದಿನ್ ಬಾವಾ ಘೋಷಿಸಿದರು.