Connect with us

    DAKSHINA KANNADA

    ರೈತ ಜಮೀನಿಗೆ ನೋಟೀಸ್ ನೀಡಿದ್ದ ವಕ್ಫ್ ಬೋರ್ಡ್ ವಿರುದ್ದ BJP ಗರಂ, ನ.4 ರಂದು ಪುತ್ತೂರಿನಲ್ಲಿ ರೈತ ಪರ ಬೃಹತ್ ಪ್ರತಿಭಟನೆ

    ಪುತ್ತೂರು : ವಕ್ಫ್ ಬೋರ್ಡ್ ನಿಂದ ರೈತರ ಜಮೀನಿಗೆ ನೋಟೀಸ್ ನೀಡಿದ್ದಕ್ಕೆ ರೈತ ವರ್ಗ ಕೆಂಡಾ ಮಂಡಲವಾಗಿದ್ದು ಇದೀಗ ರೈತ ಪರ ಹೋರಾಟಕ್ಕೆ ಬಿಜೆಪಿ ಸಾಥ್ ನೀಡಿದ್ದು ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಂಡಿದೆ.


    ಪುತ್ತೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಪ್ರಿಭಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿದ್ದ ಯಾವ ಸರಕಾರವೂ ಈ ರೀತಿ ಮಾಡಿಲ್ಲ ಆದ್ರೆ ಸಿದ್ಧರಾಮಯ್ಯ ಸರಕಾರ ಅತಿಯಾದ ಅಲ್ಪಸಂಖ್ಯಾತ ತುಷ್ಠೀಕರಣದಿಂದಾಗಿ ರೈತರಿಗೆ ನೋಟೀಸ್ ನೀಡಲಾಗಿದೆ. ಹಿಂದೆ ರಾಜ್ಯವನ್ನು ಆಳಿದ್ದ ಮುಸ್ಲಿಂ ರಾಜರ ಜಮೀನನ್ನು ಕಾಂಗ್ರೇಸ್ ಸರಕಾರ ವಕ್ಫ್ ಬೋರ್ಡ್ ಗೆ ನೀಡಿತ್ತು.

    ಆದರೆ ಅದಕ್ಕೆ ಮೊದಲೇ ಆ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೃಷಿಕರು ಮಾಡುತ್ತಿದ್ದರು. ಇದೀಗ ರಾಜ್ಯದ ವಕ್ಫ್ ಸಚಿವರೇ ರೈತರಿಗೆ ನೋಟೀಸ್ ನೀಡಿ ಎಬ್ಬಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ತನಗೆ ಈ ಅಧಿಕಾರ ನೀಡಿರುವುದಾಗಿ ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ರೈತರ ಪಹಣಿಪತ್ರದಿಂದ ವಕ್ಫ್ ಹೆಸರನ್ನು ತಕ್ಷಣ ಕಿತ್ತು ಹಾಕಬೇಕು ಈ ನಿಟ್ಟಿನಲ್ಲಿ ನವಂಬರ್ 4 ರಂದು ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಮತ್ತು ರಾಜ್ಯದಾದ್ಯಂತ ಈ ಬಗ್ಗೆ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *