Connect with us

SULLIA

ಸುಳ್ಯದಲ್ಲಿ ಕಾಡುಕೋಣ ಹಾವಳಿ

ಸುಳ್ಯದಲ್ಲಿ ಕಾಡುಕೋಣ ಹಾವಳಿ

ಮಂಗಳೂರು ಡಿಸೆಂಬರ್ 22: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಾಡುಕೋಣ ಹಾವಳಿ ಮುಂದುವರಿದಿದೆ. ಸುಳ್ಯದ ಕಾಟೂರು ಪರಿಸರದಲ್ಲಿ ಕಾಡುಕೋಣಗಳು ಹಿಂಡು ಹಿಂಡಾಗಿ ಕೃಷಿ ತೋಟಗಳಿಗೆ ಲಗ್ಗೆ ಇಟ್ಟಿದೆ.

ಕಾಟೂರಿನ ಸತೀಶ್ ಕಾಟೂರು ಎಂಬುವವರ ಮನೆ ಹಿಂದಿನ ದೃಶ್ಯ ಇದಾಗಿದ್ದು, ಕಾಡುಕೋಣಗಳ ಹಾವಳಿಗೆ ಅಡಕೆ ತೋಟದಲ್ಲಿ ಹಾಕಲಾಗಿರುವ ನೀರಿನ ಪೈಪ್ ಗಳೂ ತುಂಡಾಗಿವೆ. ಪೂಮಲೆ ಅರಣ್ಯದಿಂದ ಕಾಡುಕೋಣಗಳ ಹಿಂಡು ನಾಡಿಗೆ ಬರುತ್ತಿದ್ದು, ಅರಣ್ಯ ತಪ್ಪಲಿನ ಗ್ರಾಮಗಳ ಕೃಷಿಕರ ನಿದ್ದೆಗೆಡಿಸಿದೆ.

VIDEO