LATEST NEWS
ತಲವಾರು ಹಿಡಿದು ಬರ್ತ್ ಡೇ ಆಚರಣೆ – ಬರ್ತಡೇ ಬಾಯ್ ಸೇರಿದಂತೆ 7 ಮಂದಿ ಮೇಲೆ ಬಿತ್ತು ಕೇಸ್

ಉಡುಪಿ ಜೂನ್ 04:ಫಿಲ್ಮಿ ಸ್ಟೈಲ್ ನಲ್ಲಿ ತಲವಾರ್ ಹಿಡಿದು ಹುಟ್ಟುಹಬ್ಬದ ಕೇಕ್ ಕತ್ತರಿಸಿದ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಏಳು ಮಂದಿಯ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗಾಗಲೇ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಡುಬಿದ್ರಿ ನಿವಾಸಿಗಳಾದ ಜೀತೇಂದ್ರ ಶೆಟ್ಟಿ ಗಣೇಶ್ ಪೂಜಾರಿ ಹಾಗೂ ಶರತ್ ಶೆಟ್ಟಿ ಎಂಬರನ್ನು ವಶಕ್ಕೆ ಪಡೆಯಲಾಗಿದ್ದು , ಉಳಿದಂತೆ ತಲೆ ಮರೆಸಿಕೊಂಡಿರುವ ಬರ್ತ್ ಡೇ ಯುವಕ ನಿರಂಜನ್ ಶೆಟ್ಟಿಗಾರ್, ತನುಜ್, ಸೂರಜ್ ಹಾಗೂ ಅನಿಶ್ ಇವರ ಬಂಧನಕ್ಕೆ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಪಡುಬಿದ್ರಿ ಎಸ್ಸೈ ಪುರುಷೋತ್ತಮ್ ತಂಡ ಬಲೆ ಬೀಸಿದೆ.

ಮೇ 30 ರಂದು ಪಡುಬಿದ್ರಿಯ ಜೀತೇಂದ್ರ ಶೆಟ್ಟಿ ಮನೆಯಲ್ಲಿ ಈ ಏಳು ಮಂದಿ ಸ್ನೇಹಿತರು ತಲವಾರ್ ನ್ನು ಬಳಸಿ ನಿರಂಜನ್ ಶೆಟ್ಟಿಗಾರ್ ಎಂಬಾತನ ಹುಟ್ಟು ಹಬ್ಬ ಆಚರಿಸಿದ್ದು, ಈ ವಿಡಿಯೋ ತುಣುಕನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಇದು ಪೊಲೀಸ್ ಇಲಾಖೆಗೆ ತಿಳಿದು ಇದೀಗ 7 ಮಂದಿಗೆ ಸಂಕಷ್ಟ ತಂದೊಡ್ಡಿದೆ.