KARNATAKA
ಡ್ರಗ್ಸ್ ಸ್ಮಗ್ಲಿಂಗ್ ಪ್ರಕರಣ, ಸಿಪಿಐಎಂ ಮುಖಂಡನ ಮಗ ಇಡಿ ವಿಚಾರಣೆಗೆ ಹಾಜರು …….
ಡ್ರಗ್ಸ್ ಸ್ಮಗ್ಲಿಂಗ್ ಪ್ರಕರಣ, ಸಿಪಿಐಎಂ ಮುಖಂಡನ ಮಗ ಇಡಿ ವಿಚಾರಣೆಗೆ ಹಾಜರು …….
ಬೆಂಗಳೂರು, ಅಕ್ಟೋಬರ್ 06:ಡ್ರಗ್ಸ್ ಸ್ಮಗ್ಲಿಂಗ್ ಕೇಸ್ ಗೆ ಸಂಬಂಧಪಟ್ಟಂತೆ ಕೇರಳದ ಸಿಪಿಐಂಎಂ ಮುಖಂಡ ಕೋಡಿಯೇರಿ ಬಾಲಕೃಷ್ಣನ್ ಮಗ ಬಿನೇಷ್ ಕೋಡಿಯೇರಿ ಬೆಂಗಳೂರಿನ ಇಡಿ ಕಛೇರಿಗೆ ಹಾಜರಾಗಿದ್ದಾರೆ.
ದೇಶದೆಲ್ಲೆಡೆ ಇದೀಗ ಡ್ರಗ್ಸ್ ಕುರಿತಂತೆ ದಾಳಿ ಹಾಗೂ ತನಿಖೆ ಆರಂಭಗೊಂಡಿದ್ದು, ಈ ದಂಧೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ನಟ-ನಟಿಯರು ಹೀಗೆ ಎಲ್ಲರೂ ಶಾಮೀಲಾಗಿರುವುದು ಇದೀಗ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ.
ಮಾದಕವಸ್ತು ನಿಯಂತ್ರಣ ಬ್ಯೂರೋ ಈಗಾಗಲೇ ತನ್ನ ತನಿಖೆಯನ್ನು ದೇಶದಾದ್ಯಂತ ಕೈಗೆತ್ತಿಕೊಂಡಿದ್ದು, ಡ್ರಗ್ಸ್ ಜಾಲದಲ್ಲಿದ್ದ ಹಲವರು ಈಗಾಗಲೇ ಜೈಲು ಪಾಲಾಗಿದ್ದಾರೆ.
ಇನ್ನು ಕೆಲವರು ಜೈಲು ಪಾಲಾಗುವ ಹಂತದಲ್ಲಿದ್ದು, ಈ ನಡುವೆ ಜಾರಿ ನಿರ್ದೇಶನಾಲಯವೂ ಇದೀಗ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಸಿಪಿಐಎಂ ಮುಖಂಡ ಕೋಡಿಯೇರಿ ಬಾಲಕೃಷ್ಣ ಅವರ ಮಗನನ್ನು ವಿಚಾರಣೆಗೆ ಕರೆದಿದೆ.
ಈ ಸಂಬಂಧ ಬಿನೇಷ್ ಕೋಡಿಯೇರಿ ಇಂದು ಬೆಂಗಳೂರಿನ ಜಾರಿ ನಿರ್ದೇಶನಾಲಯ ಕಛೇರಿಗೆ ಆಗಮಿಸಿದ್ದಾರೆ.
ಡ್ರಗ್ಸ್ ಟ್ರಾಫಿಕಿಂಗ್ ಸಂಬಂಧಿಸಿದಂತೆ ಅಧಿಕಾರಿಗಳು ಬಿನೇಷ್ ಕೋಡಿಯೇರಿಯವರನ್ನು ಪ್ರಶ್ನಿಸಲಿದ್ದು, ಈ ಮೂಲಕ ಕೇರಳದಲ್ಲಿ ಡ್ರಗ್ಸ್ ನ ಲಿಂಕ್ ಗಳನ್ನೂ ಕಳಚುವ ಸಾಧ್ಯತೆಯಿದೆ.