DAKSHINA KANNADA
ಬಿಲ್ಲವ ಮುಖಂಡರಿಗೆ ಶಾಸಕರಿಂದ ಅವಮಾನ: ಪ್ರಣವಾನಂದ ಶ್ರೀ ಆರೋಪ
ಮಂಗಳೂರು, ಎಪ್ರಿಲ್ 18: ಬಿಲ್ಲವ ಮುಖಂಡರಿಗೆ ಶಾಸಕರಿಂದ ಅವಮಾನ ಮಾಡಿದ್ದಾರೆ ಎಂದು ಪ್ರಣವಾನಂದ ಶ್ರೀ ಆರೋಪಿಸಿದ್ದರೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಗಳ ಟಿಕೆಟ್ ಹಂಚಿಕೆ ಯಲ್ಲಿ ಬಿಲ್ಲವರಿಗೆ ನ್ಯಾಯ ದೊರೆತ್ತಿಲ್ಲ. ಹಿಂದೆ ಕನಿಷ್ಠ ಎರಡು ಕ್ಷೇತ್ರ ಗಳಲ್ಲಿ ಅವಕಾಶ ನೀಡಲಾಗುತ್ತಿತ್ತು. ಈ ಬಾರಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ನೀಡಲಾಗಿದೆ. ಸುಮಾರು 9 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರೂ ಕಾಂಗ್ರೆಸ್ ಪರಿಗಣಿಸಿಲ್ಲ.
ಇದನ್ನು ಸರಿ ಪಡಿಸಿ ಇನ್ನು ಉಳಿದ ಒಂದು ಕ್ಷೇತ್ರದಲ್ಲಿಯಾದರೂ ನೀಡದಿದ್ದರೆ ಎ.26ರಿಂದ ಬಿ.ಸಿ.ರೋಡ್ ನಿಂದ ಕುದ್ರೋಳಿ ವರೆಗೆ ಪಾದಯಾತ್ರೆ ಮಾಡಿ ಪ್ರತಿಭಟನೆ ಮಾಡುವುದಾಗಿ ಈಡಿಗ ಬಿಲ್ಲವ ನಾಮಧಾರಿ ಸಮಾಜದ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣರು ಇತ್ತೀಚೆಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದ ವ್ಯಾಸ ಕಾಮತ್ ರನ್ನು ಭೇಟಿ ಮಾಡಲು ಸರ್ಕ್ಯೂಟ್ ಹೌಸ್ ಗೆ ಹೋದ ಸಂದರ್ಭ ಶಾಸಕರು ಅವಮಾನ ಮಾಡಿದ್ದಾರೆ. ಶಾಸಕರು ತಮ್ಮ ಹೊಣೆಗಾರಿಕೆಗೆ ವಿರುದ್ಧವಾಗಿ ನಡೆದು ಕೊಂಡಿದ್ದಾರೆ. ಶಾಸಕರ ಈ ರೀತಿಯ ವರ್ತನೆ ಸರಿಯಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಬಿಜೆಪಿ ಬಿಲ್ಲವ ರಿಗೆ ನಿಗಮ ನೀಡಿದ್ದರೂ ಅದಕ್ಕೆ ಅನುದಾನ ನೀಡದೆ ವಂಚಿಸಿದೆ ಎಂದು ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣ, ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಉಪಸ್ಥಿತರಿದ್ದರು.