DAKSHINA KANNADA
ಗೋವುಗಳೊಂದಿಗೆ ಮಗನ ಹುಟ್ಟುಹಬ್ಬ ಆಚರಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ದಂಪತಿ..!
ಮಂಗಳೂರು : ‘ಕಾಂತಾರ1’ ಸೂಪರ್ ಸಕ್ಸಸ್ ನಂತರ ‘ಕಾಂತಾರ 2’ ಸಿನಿಮಾದ ಸಿದ್ಧತೆಯಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಿಸಿಯಾಗಿದ್ದಾರೆ.
ಈ ನಡುವೆ ಮುದ್ದು ಮಗ ರಣ್ವೀತ್ ಶೆಟ್ಟಿ ಹುಟ್ಟುಹಬ್ಬವನ್ನ ಗೋಶಾಲೆಯಲ್ಲಿ ರಿಷಬ್ ದಂಪತಿ ಆಚರಿಸಿದ್ದಾರೆ. ಮಗನ ಬರ್ತ್‌ಡೇ ಹೇಗಿತ್ತು ಎಂದು ಈ ಕುರಿತ ವೀಡಿಯೋ ಕೂಡ ಹಂಚಿಕೊಂಡಿದ್ದಾರೆ. ‘ರಿಕ್ಕಿ’ ಸಿನಿಮಾ ಫಸ್ಟ್ ಡೇ ಶೋನಲ್ಲಿ ಪ್ರಗತಿ ಶೆಟ್ಟಿ ಅವರ ಪರಿಚಯವಾಗಿತ್ತು.
ಆ ಪರಿಚಯ ಪ್ರೀತಿಗೆ ತಿರುಗಿ, ಗುರುಹಿರಿಯರ ಸಮ್ಮತಿಯ ಮೇರೆಗೆ 2017ರಲ್ಲಿ ಕುಂದಾಪುರದಲ್ಲಿ ಮದುವೆಯಾದರು. ರಣ್ವೀತ್ ಮತ್ತು ರಾಧ್ಯ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇತ್ತೀಚಿಗೆ ಮುದ್ದು ಮಗಳು ರಾಧ್ಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.
ರಿಷಬ್ ದಂಪತಿಯ ಮೊದಲ ಮಗ ರಣ್ವೀತ್ ನಾಲ್ಕು ವರ್ಷಗಳು ಪೂರೈಸಿದ್ದು, ಬರ್ತ್‌ಡೇ ವೀಡಿಯೋವನ್ನ ನಟ ಶೇರ್ ಮಾಡಿದ್ದಾರೆ. ಗೋವುಗಳ ಜೊತೆ ರಣ್ವೀತ್ ತುಂಟಾಟ ಹೇಗಿತ್ತು ಎಂದು ವೀಡಿಯೋದಲ್ಲಿ ನೋಡಬಹುದಾಗಿದೆ.
ಈಗ ಮಗನ ಬರ್ತ್‌ಡೇಯನ್ನ ಮಗನ ಇಷ್ಟದಂತೆ ಗೋವುಗಳ ಜೊತೆ ಆಚರಿಸಿದ್ದಾರೆ. ರಿಷಬ್ ನಟನೆ, ನಿರ್ದೇಶನದ ‘ಕಾಂತಾರ 2 ಬಗ್ಗೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.
You must be logged in to post a comment Login