Connect with us

KARNATAKA

ಮನೆಗೆ ಬಂದವರನ್ನು ಬಿಕಿನಿಯಲ್ಲಿ ಸ್ವಾಗತ ಮಾಡಿ ಹನಿಟ್ರ್ಯಾಪ್ – ಸುಂದರಿ ಅರೆಸ್ಟ್…!!

Share Information

ಬೆಂಗಳೂರು ಅಗಸ್ಟ್ 16 : ಸಾಮಾಜಿಕ ಜಾಲತಾಣದಲ್ಲಿ ಪುರುಷರನ್ನು ಆಕರ್ಷಿಸಿ ಅವರನ್ನು ಹನಿಟ್ರ್ಯಾಪ್ ಗೆ ಬೀಳಿಸುತ್ತಿದ್ದ ಗ್ಯಾಂಗ್ ಒಂದನ್ನು ಪೊಲೀಸರು ಬಲೆಗೆ ಬೀಳಿಸಿದ್ದು, ಒರ್ವ ಮಹಿಳೆ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಇಲ್ಲಿಯವರೆಗೆ 12ಕ್ಕೂ ಹೆಚ್ಚು ಪುರುಷರನ್ನು ವಂಚಿಸಿದ ಮೂವರು ಪುರುಷರು ಹಾಗೂ ಮಹಿಳೆಯನ್ನು ಬಂಧಿಸಿದ್ದಾರೆ. ಆರೋಪಿಗಳು ಸಂತ್ರಸ್ತರಿಂದ ಸುಮಾರು 30 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.


ಬಂಧಿತರನ್ನು ನೇಹಾ ಅಲಿಯಾಸ್ ಮೆಹರ್, ಶರಣ್ ಪ್ರಕಾಶ್, ಅಬ್ದುಲ್ ಖಾದರ್ ಮತ್ತು ಯಾಸಿನ್ ಬಂಧಿತರು. ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರನ್ನು ಟ್ರ್ಯಾಪ್ ಮಾಡಿ ನಂತರ ಆತ್ಮೀಯ ಕ್ಷಣಗಳನ್ನು ರೆಕಾರ್ಡ್ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನೇಹಾ ಅಲಿಯಾಸ್ ಮೆಹರ್ ಎಂಬ ಮಹಿಳೆಗಾಗಿ ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದರು. ಹಲವು ದಿನಗಳ ಶೋಧ ಕಾರ್ಯಾಚರಣೆಯ ನಂತರ ಮಹಿಳೆಯನ್ನು ಮುಂಬೈನಲ್ಲಿ ಪತ್ತೆ ಹಚ್ಚಿ ಮಂಗಳವಾರ ಬೆಂಗಳೂರಿಗೆ ಕರೆತರಲಾಯಿತು .


ನೇಹಾ ತನ್ನ ಗ್ರಾಹಕರನ್ನು ಟೆಲಿಗ್ರಾಮ್ ಮೂಲಕ ಸಂಪರ್ಕಿಸುತ್ತಿದ್ದರು. ಮಹಿಳೆಯು ಪುರುಷರೊಂದಿಗೆ ಸಂಪರ್ಕವನ್ನು ಸ್ಥಾಪಿಸಿದ ನಂತರ, ಅವರನ್ನು ಜೆಪಿ ನಗರದ 5 ನೇ ಹಂತದಲ್ಲಿರುವ ಮನೆಗೆ ಬರಲಿಕ್ಕೆ ಹೇಳುತ್ತಿದ್ದಳು. ಸಂತ್ರಸ್ತರು ಮನೆಗೆ ಪ್ರವೇಶಿಸಿದ ನಂತರ ನೇಹಾ ಅವರನ್ನು ಬಿಕಿನಿಯಲ್ಲಿ ಸ್ವಾಗತಿಸುತ್ತಿದ್ದಳು. ಬಳಿಕ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇವರಿಬ್ಬರ ಆತ್ಮೀಯ ಕ್ಷಣಗಳು ರೇಕಾರ್ಡ್ ಆಗುತ್ತಿದ್ದವು. ಇದೇ ವೇಳೆ  ಮೂವರು ವ್ಯಕ್ತಿಗಳು ಮನೆಗೆ ನುಗ್ಗಿ ಸಂತ್ರಸ್ತರ ಮೊಬೈಲ್ ಫೋನ್ ಕಸಿದುಕೊಳ್ಳುತ್ತಾರೆ ಮತ್ತು ಕೆಲವು ಸಂಪರ್ಕಗಳನ್ನು ಟಿಪ್ಪಣಿ ಮಾಡುತ್ತಾರೆ.

ಆರೋಪಿಗಳು ಸಂತ್ರಸ್ತರಿಗೆ ವೀಡಿಯೊಗಳನ್ನು ಅವರ ಪೋನ್ ನಲ್ಲಿರುವ ನಂಬರ್ ಗಳಿಗೆ ಕಳುಹಿಸುತ್ತೇವೆ ಎಂದು ಬ್ಲ್ಯಾಕ್ ಮೇಲೆ ಮಾಡಿ ಹಣ ವಸೂಲಿ ಮಾಡುತ್ತಿದ್ದರು.  ಇದು ಗ್ಯಾಂಗ್‌ನ ಕಾರ್ಯಾಚರಣೆಯಾಗಿದ್ದು, ಈ ಮೂಲಕ ವಿವಿಧ ವಯೋಮಾನದ ಪುರುಷರು ಸಿಕ್ಕಿಬಿದ್ದಿದ್ದಾರೆ. ಸಂತ್ರಸ್ತರಲ್ಲಿ ಒಬ್ಬರು ಹಣ ಪಾವತಿಸಲು ಸಾಧ್ಯವಾಗದೆ ಪೊಲೀಸರನ್ನು ಸಂಪರ್ಕಿಸಿದರು. ವಿಚಾರಣೆ ವೇಳೆ ಆರೋಪಿಗಳು ಇತರ 12 ಮಂದಿಯಿಂದ ಹಣ ಪಡೆಯಲು ಇದೇ ವಿಧಾನವನ್ನು ಬಳಸಿರುವುದು ಪತ್ತೆಯಾಗಿದೆ. ಬಂಧನದ ನಂತರ ಪೊಲೀಸರು ಅವರ ಬ್ಯಾಂಕ್ ಖಾತೆಗಳಿಂದ 30 ಲಕ್ಷ ರೂ.ಗೂ ಹೆಚ್ಚು ಹಣವನ್ನು ಪತ್ತೆ ಹಚ್ಚಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply