Connect with us

LATEST NEWS

ಟೆಸ್ಟ್ ರೈಡ್ ಗೆಂದು ಹೋದವನು ಬೈಕ್ ನೊಂದಿಗೆ ನಾಪತ್ತೆ

ಉಡುಪಿ ನವೆಂಬರ್ 3: ಬೈಕ್ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ನ್ನು ಕದ್ದು ಪರಾರಿಯಾದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ನ್ಯೂ ಮಣಿಪಾಲ್ ಬಜಾರ್‌ನಲ್ಲಿ ಈ ಘಟನೆ ನಡೆದಿದ್ದು, ಹೆರ್ಗದ, ತ್ರಿಶಂಕು ನಗರ ನಿವಾಸಿ ಪ್ರಶಾಂತ್‌‌ ಕುಮಾರ್‌ ಎಂಬವರು ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ನ್ಯೂ ಮಣಿಪಾಲ್ ಬಜಾರ್ ಎಂಬ ಸೆಕೆಂಡ್ ಹ್ಯಾಂಡ್ ಶಾಪ್ ಇಟ್ಟುಕೊಂಡು ವಾಹನ ಸೇಲ್ ಮತ್ತು ಖರೀದಿ ವ್ಯವಹಾರವನ್ನು ಮಾಡಿಕೊಂಡಿದ್ದರು. ಅಕ್ಟೋಬರ್ 31ರ ಶನಿವಾರದಂದು ಮಧ್ಯಾಹ್ನ 2.30ರ ಸುಮಾರಿಗೆ ಶಾಪ್‌ಗೆ ಗಣೇಶ್‌ ಉದ್ಯಾವರ ಎಂಬ ಹೆಸರು ಹೇಳಿಕೊಂಡು ಬಂದ ಓರ್ವ ವ್ಯಕ್ತಿ ಹಳೆಯ ದ್ವಿಚಕ್ರ ವಾಹನ ಬೇಕೆಂದು ಕೇಳಿದ್ದಾನೆ. ಈ ವೇಳೆ ಮಾರಾಟ ಮಾಡಲು ಇಟ್ಟಿದ್ದ ಟಿವಿಎಸ್‌‌‌ ವಿಕ್ಟರ್‌ ಬೈಕ್‌ ಅನ್ನು ನೋಡಿ ಟೆಸ್ಟ್‌‌ ರೈಡ್‌ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಬೈಕ್‌ ಕೀ ಪಡೆದುಕೊಂಡಿದ್ದಾನೆ. ಬೈಕ್‌ ‌ಟೆಸ್ಟ್‌ ರೈಡ್‌ಗೆ ಹೋಗಿ ಬರುತ್ತೇನೆ ಎಂದಾತ ಬೈಕ್‌ ಅನ್ನು ವಾಪಾಸ್ಸು ನೀಡದೇ ಪರಾರಿಯಾಗಿದ್ದಾನೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments