Connect with us

BELTHANGADI

ಬೈಕ್‌ ಕಳವು ಪ್ರಕರಣ – ಐವರು ಆರೋಪಿಗಳು ಪೊಲೀಸ್‌ ವಶಕ್ಕೆ

ಬೆಳ್ತಂಗಡಿ, ಜುಲೈ 05: ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆಯುತ್ತಿದ್ದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಯವರು ಐವರು ಆರೋಪಿಗಳನ್ನು ವಶಕ್ಕೆ ಪಡೆದು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುರತ್ಕಲ್‌ನ ವಿಜಯ ಯಾನೆ ಆಂಜನೇಯ (23), ಉಳಾಯಿಬೆಟ್ಟು ನಿವಾಸಿ ಪ್ರದೀಪ್ ಯಾನೆ ಚೇತನ್ ಯಾನೆ ಪ್ರದಿ ( 27), ಬಂಟ್ವಾಳದ ಬಾಳೆಪುಣಿ ಪೂಪಾಡಿಕಲ್ಲು ನಿವಾಸಿ ಸುದೀಶ್ ಕೆಕೆ ಯಾನೆ ಮುನ್ನ (20), ಬೆಳ್ತಂಗಡಿಯ ಉಜಿರೆಯ ಕುಂಟಿನಿ ಲಾಯಿಲ ಗ್ರಾಮದ ನಿವಾಸಿ ಮೋಹನ ಯಾನೆ ಪುಟ್ಟ (21) ಹಾಗೂ ಬೆಳ್ತಂಗಡಿ ಕುಂಟಿನಿ ಲಾಯಿಲ ಗ್ರಾಮ ನಿವಾಸಿ ನಿತಿನ್ ಕುಮಾರ್ (22).

ಜುಲೈ 4ರ ಶನಿವಾರದಂದು ಜೈನ್ ಪೇಟೆ ಬಳಿ ವಾಹನ ತಪಾಸಣೆಯ ವೇಳೆ ಈ ವಾಹನ ಕಳ್ಳತನದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಅವರಿಂದ 4 ಬೈಕ್ ಕಳವಿಗೆ ಬಳಸಿದ ಓಮ್ನಿ ಕಾರು ಒಟ್ಟು 3,60,000 ರೂಪಾಯಿ ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.