Connect with us

    BANTWAL

    ರಸ್ತೆ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಹರಿದ ಬೈಕ್ – ಅಪಘಾತದ ಸಿಸಿಟಿವಿ ವಿಡಿಯೋ

    ಬಂಟ್ವಾಳ:ರಾತ್ರಿ ಸಂದರ್ಭ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸಡನ್ ಆಗಿ ರಸ್ತೆ ಮೇಲೆ ಮಲಗಿದ್ದರ ಪರಿಣಾಮ ಅವರ ಮೇಲೆ ಬೈಕ್ ಒಂದು ಹರಿದು ಸಾವನಪ್ಪಿರುವ ಘಟನೆ ಬಂಟ್ವಾಳದ ಸಜಿಪಮೂಡ ಗ್ರಾಮದ ಕೋಯಮಜಲು ಎಂಬಲ್ಲಿ ನಡೆದಿದೆ.


    ಮೃತರನ್ನು ಸಜಿಪಮುನ್ನೂರು ನಿವಾಸಿ ಕೃಷ್ಣಮೂರ್ತಿ (50) ಎಂದು ಗುರುತಿಸಲಾಗಿದೆ. ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಸೆಪ್ಟೆಂಬರ್ 12ರಂದು ರಾತ್ರಿ ಸುಮಾರು 8.15ರ ವೇಳೆ ನಕೃಷ್ಣಮೂರ್ತಿ ನಡೆದುಕೊಂಡು ಹೋಗುತ್ತಿದ್ದರು, ಬಳಿಕ ರಸ್ತೆಯಲ್ಲಿ ಮಲಗಿದ್ದಾರೆ. ಈ ಸಂದರ್ಭ ಬಂದ ದ್ವಿಚಕ್ರ ವಾಹನ ಸೈಡ್ ನಿಂದ ತೆರಳಿದೆ. ಆದರೆ ಅದರ ಹಿಂದೆ ಬಂದ ಮತ್ತೊಂದು ದ್ವಿಚಕ್ರ ವಾಹನವೊಂದು ಅವರ ಮೇಲೆ ಹರಿದು ಸ್ಕೂಟರ್ ಸವಾರನೂ ಬಿದ್ದಿದ್ದಾನೆ.ಅಪಘಾತ ನಡೆದ ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಮೂರ್ತಿ ಸಾವನ್ನಪ್ಪಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply