Connect with us

    FILM

    ಮೊದಲ ಹೆಂಡತಿ ಹೊರಗೆ ಹೋದ ಬೆನ್ನಲ್ಲೆ ಬಿಗ್ ಬಾಸ್ ನಲ್ಲೇ ಎರಡನೇ ಹೆಂಡತಿ ಜೊತೆ ಬಿಗ್ ಬಾಸ್ ಸ್ಪರ್ಧಿಯ ರೊಮ್ಯಾನ್ಸ್

    ಮುಂಬೈ ಜುಲೈ 15: ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ OTT 3 ಮತ್ತೊಮ್ಮೆ ತನ್ನ ಪ್ರೇಕ್ಷಕರ ಗಮನವನ್ನು ಸೆಳೆದಿದೆ, ಈ ಬಾರಿ ಜುಲೈ 12 ರಂದು ಪ್ರಸಾರವಾದ ಸಂಚಿಕೆಯಲ್ಲಿ ನಡೆದ ಘಟನೆ ಸದ್ಯ ವೈರಲ್ ಆಗಿದೆ


    ಬಿಗ್ ಬಾಸ್ ಹಿಂದಿ ಓಟಿಟಿಯಲ್ಲಿ ಈ ಬಾರಿ ಯುಟ್ಯೂಬರ್ ಅರ್ಮಾನ್ ಮಲ್ಲಿಕ್ ತನ್ನ ಇಬ್ಬರು ಹೆಂಡತಿಯರೊಂದಿಗೆ ಆಗಮಿಸಿದ್ದಾರೆ. ಟೀಕೆಗಳ ಹೊರತಾಗಿಯೂ, ಅರ್ಮಾನ್ ಮತ್ತು ಅವರ ಪತ್ನಿಯರು ಯಾವಾಗಲೂ ತಮ್ಮ ಸಂಬಂಧದ ಬಗ್ಗೆ ಮುಕ್ತ ಮತ್ತು ವಿಶ್ವಾಸ ಹೊಂದಿದ್ದಾರೆ. ಯೂಟ್ಯೂಬರ್ ಅರ್ಮಾನ್ ಮಲಿಕ್ ತಮ್ಮ ಇಬ್ಬರು ಹೆಂಡತಿಯರಾದ ಕೃತಿಕಾ ಮತ್ತು ಪಾಯಲ್ ಜೊತೆ ಎಂಟ್ರಿ ಕೊಟ್ಟಿದ್ದರು. ಆದರೆ ಬಂದ ಮೊದಲ ವಾರಕ್ಕೆ ಪತ್ನಿ ಪಾಯಲ್​ ಮಲಿಕ್​ ಶೋನಿಂದ ಎಲಿಮಿನೇಟ್ ಆಗಿದ್ದರು. ಸದ್ಯ ಅರ್ಮಾನ್ ಮಲಿಕ್ ಜೊತೆಗೆ ಕೃತಿಕಾ ಮಲಿಕ್​ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ.


    ಆದರೆ ಇದರ ಮಧ್ಯೆ ಬಿಗ್​ಬಾಸ್​ ಕ್ಯಾಮೆರಾ ಕಣ್ಣಿಗೆ ವಿಡಿಯೋವೊಂದು ಸೆರೆ ಸಿಕ್ಕಿದೆ. ಅರ್ಮಾನ್ ಮಲಿಕ್ ಹಾಗೂ ಕೃತಿಕಾ ಮಲಿಕ್​ ಇಬ್ಬರು ಬೆಡ್​ ಮೇಲೆ ರೊಮ್ಯಾನ್ಸ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಈ ವಿಡಿಯೋ ನೋಡಿದ ವೀಕ್ಷಕರು ದಂಪತಿ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ವಿಡಿಯೋ ಕಳೆದ ರಾತ್ರಿಯ ಸಂಚಿಕೆಯಲ್ಲಿ ಲೈಟ್ಸ್​ ಆಫ್ ಮಾಡಿದ ಬಳಿಕ ಕಂಡು ಬಂದಿದೆ. ಇದೀಗ ಬಿಗ್​ಬಾಸ್​ ಶೋ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply