FILM
ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಮತ್ತೆ ಅರೆಸ್ಟ್

ಬೆಂಗಳೂರು ಎಪ್ರಿಲ್ 16: ಮಚ್ಚು ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡಿ ಅರೆಸ್ಟ್ ಆಗಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ನನ್ನು ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದಾರೆ.
ಮಚ್ಚು ಹಿಡಿದು ರೀಲ್ಸ್ ಮಾಡಿದ ಆರೋಪದಡಿ ಬಂಧಿತರಾಗಿದ್ದ ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರಿಗೆ ನಗರದ 24ನೇ ಎಸಿಎಂಎಂ ನ್ಯಾಯಾಲಯ ಈ ಹಿಂದೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಜಾಮೀನು ಪಡೆದು ಷರತ್ತು ಉಲ್ಲಂಘಿಸಿದ್ದಕ್ಕೆ ರಜತ್‌ನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ರೀಲ್ಸ್ ಮಾಡಿದ್ದಾಗಿ ಅರೆಸ್ಟ್ ಆಗಿದ್ದ ವೇಳೆ ವಿಚಾರಣೆಗೆ ಹಾಜರಾಗಿದ್ದ ವೇಳೆ ರಜತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿ ವಿಚಾರಣೆ ವೇಳೆ ಹಾಜರಾಗುವಂತೆ ಸೂಚಿಸಿ ನ್ಯಾಯಾಲಯ ಷರತ್ತು ವಿಧಿಸಿ ಜಾಮೀನು ನೀಡಿತ್ತು. ಆದರೆ ರಜತ್ ಮಾತ್ರ ವಿಚಾರಣೆಗೆ ಗೈರಾಗಿದ್ದ. ಹೀಗಾಗಿ ನ್ಯಾಯಾಲಯ ರಜತ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಕೋರ್ಟ್ನಿಂದ NBW ಹಿನ್ನೆಲೆಯಲ್ಲಿ ರಜತ್ ಮತ್ತೆ ಬಂಧನವಾಗಿದೆ.

ರಜತ್‌ನನ್ನು ಎರಡನೇ ಬಾರಿಗೆ ಬಂಧಿಸಿರುವ ಬಸವೇಶ್ವರನಗರ ಪೊಲೀಸರು, ನಗರದ 24ನೇ ಎಸಿಜೆಎಂ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣ ಮತ್ತೋರ್ವ ಆರೋಪಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಮನೆಗೆ ಪೊಲೀಸರು ಬಂಧನಕ್ಕಾಗಿ ತೆರಳಿದ್ದಾರೆ.