FILM
ಬಿಗ್ ಬಾಸ್ ಗೆ ನಾನು ಬರಲ್ಲ ಅಂದ ನಟಿ – ಯಾಕೆ ಗೊತ್ತಾ…?

ಬೆಂಗಳೂರು ಅಗಸ್ಟ್ 09: ಕನ್ನಡ ಬಿಗ್ ಬಾಸ್ ಸೀಸನ್ 11 ಕ್ಕೆ ಈಗಾಗಲೇ ಸಿದ್ದತೆ ಪ್ರಾರಂಭವಾಗಿದ್ದು. ಈ ಬಾರಿ ಯಾರು ಮನೆಯೊಳಗೆ ತೆರಳುತ್ತಾರೆ ಎನ್ನುವ ಕುತೂಹಲ ಶುರುವಾಗಿದೆ ಈ ನಡುವೆ ನಟಿಯೊಬ್ಬರು ನಾನು ಬಿಗ್ ಬಾಸ್ ಗೆ ಬರಲ್ಲ ಎನ್ನುವ ಮೂಲಕ ಸುದ್ದಿಯಲ್ಲಿದ್ದಾರೆ.
ಕಿರುತೆರೆ ನಟಿ ಸದಾ ಸಾಮಾಜಿಕ ಜಾಲತಾಣದಲ್ಲಿ ತನ್ನ ಹಾಟ್ ಹಾಟ್ ಪೋಟೋಗಳ ಮೂಲಕ ಸೆನ್ಸೇಷನ್ ಕ್ರಿಯೆಟ್ ಮಾಡುವ ಕನ್ನಡತಿ ಜ್ಯೋತಿ ರೈ ಬಿಗ್ ಬಾಸ್ ನ ಆಫರ್ ನ್ನು ತಿರಸ್ಕರಿಸಿದ್ದಾರೆ.

ಕೆಲ ವೀಕ್ಷಕರು ಕನ್ನಡ ಬಿಗ್ ಬಾಸ್ ಶೋನಲ್ಲಿ ನಾನು ಇರ್ತೀನಿ ಇಲ್ಲವೋ ಎನ್ನೋದರ ಬಗ್ಗೆ ವಿಚಾರಣೆ ಮಾಡುತ್ತಿರುವುದು, ನನ್ನ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿರುವುದನ್ನು ನಾನು ಅಭಿನಂದಿಸುತ್ತೇನೆ. ‘ಬಿಗ್ ಬಾಸ್’ ಆಯೋಜಕರು ನನ್ನನ್ನು ಕಾಂಟ್ಯಾಕ್ಟ್ ಮಾಡಿದ್ದರು, ನನಗೆ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲು ಆಫರ್ ಬಂದಿತ್ತು. ಈಗಿರುವ ಪರಿಸ್ಥಿತಿ, ಕಮಿಟ್‌ಮೆಂಟ್‌ಗಳಿಂದ ನಾನು ಈ ಆಫರ್‌ನ್ನು ಸವಿನಯದಿಂದಲೇ ತಿರಸ್ಕರಿಸಿದ್ದೇನೆ. ನನಗೆ ಸಿಗುತ್ತಿರುವ ಅವಕಾಶಕ್ಕೆ ಧನ್ಯವಾದಗಳು.
ಕಳೆದ 21 ವರ್ಷಗಳಿಂದ ಚಿತ್ರರಂಗದಲ್ಲಿರುವ ಜ್ಯೋತಿ ರೈ ಅವರು ಲೀಡ್ ಆಗಿಯೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಕೆಲ ವರ್ಷಗಳಿಂದ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಜ್ಯೋತಿ ರೈ ಅವರು ವರ್ಷಗಳ ಹಿಂದೆ ತೂಕ ಇಳಿಸಿಕೊಂಡು ಬೋಲ್ಡ್ ಫೋಟೋಶೂಟ್ ಮಾಡಿಸಿಕೊಂಡರು. ಹೀಗೆ ಒಂದಾದ ಮೇಲೆ ಒಂದರಂತೆ ಬೋಲ್ಡ್ ಫೋಟೋ ಹಂಚಿಕೊಂಡರು.