Connect with us

    LATEST NEWS

    5 ನೇ ಅಂತಸ್ತಿನಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಗುವಿನ ಮೇಲೆ ಬಿದ್ದ ನಾಯಿ- ಮಗು ಧಾರುಣ ಸಾವು

    ಥಾಣೆ ಅಗಸ್ಟ್ 09: ತನ್ನ ತಾಯಿಯೊಂದಿಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಮಗುವಿನ ಮೇಲೆ ನಾಯಿಯೊಂದು ಬಿದ್ದು ಮಗು ಸಾವನಪ್ಪಿದ ಘಟನೆ ಮುಂಬೈನಲ್ಲಿ ವರದಿಯಾಗಿದ್ದು, ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.


    ಮುಂಬೈ ಮಹಾನಗರದ ಥಾಣೆಯಲ್ಲಿ ಈ ಘಟನೆ ನಡೆದಿದೆ. ಮೂರು ವರ್ಷದ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಮುಂಬೈನ ಮುಂಬ್ರಾ ಬಳಿಯ ಅಮೃತ್ ನಗರದ ಚಿರಾಗ್ ಮೆನ್ಸನ್ ಎಂಬ ಐದು ಅಂತಸ್ತಿನ ಕಟ್ಟಡದ ಫ್ಲ್ಯಾಟ್ ವೊಂದರಲ್ಲಿ ನಾಯಿ ಸಾಕಲಾಗಿತ್ತು. ಈ ನಾಯಿ ಮಂಗಳವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಆಟವಾಡುತ್ತಾ ರಸ್ತೆಯ ಮೇಲೆ ಹಠಾತ್ ಎಗರಿ ಬಿದ್ದಿದೆ. ಈ ವೇಳೆ ಅಜ್ಜಿ ಹಾಗೂ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಮಗು ನಾಯಿಯ ಅಡಿಯಲ್ಲಿ ಸಿಲುಕಿದೆ.


    ದೈತ್ಯ ನಾಯಿ ಬಿದ್ದ ರಭಸಕ್ಕೆ ಮಗು ಕೆಳಗೆ ಅಪ್ಪಚ್ಚಿಯಾಗಿದ್ದು, ನಿತ್ರಾಣವಾಗಿದೆ. ಕೂಡಲೇ ಮಗುವನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಕೆಲ ಹೊತ್ತು ನಿತ್ರಾಣವಾಗಿದ್ದ ನಾಯಿ ಬಳಿಕ ಎಚ್ಚರಗೊಂಡು ಅಲ್ಲಿಂದ ಹೊರಟು ಹೋಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 3 ವರ್ಷದ ಮಗು ಸಾವನ್ನಪ್ಪಿದೆ.

    ಮೂರು ವರ್ಷದ ಮಗುವಿನ ಸಾವಿಗೆ ಕಾರಣವಾದ ನಾಯಿಯನ್ನು ಚಿರಾಗ್ ಮೆನ್ಸನ್ ನ ನಿವಾಸಿ ಜೈದ್ ಸೈಯ್ಯದ್ ಎಂಬುವರು ಸಾಕಿದ್ದರು. ಆದರೆ ಅವರ ನಾಯಿ ಐದನೇ ಮಹಡಿಯ ಮನೆಯಿಂದ ನಾಯಿ ರಸ್ತೆಗೆ ಏಕಾಏಕಿ ಬಿದ್ದಿದ್ದು ಹೇಗೆ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಮಗು ಸಾವು ಬೆನ್ನಲ್ಲೇ ನಾಯಿಯ ಮಾಲೀಕ ಮತ್ತು ಇತರ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬ್ರಾ ಪೊಲೀಸರು ಇದೀಗ ನಾಯಿ ಮಾಲೀಕರನ್ನು ಬಂಧಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply