Connect with us

    BANTWAL

    ಬಂಟ್ವಾಳ ಮೂಲರಪಟ್ನದಲ್ಲಿ ಮತ್ತೆ ಮರಳಿನ ಭೂತ:ಸಮಾನ ಮನಸ್ಕ ಪಕ್ಷದ ಫುಡಾರಿಗಳಿಂದ ಮಾಫಿಯಾ ದರ್ಬಾರ್ 

    ಬಂಟ್ವಾಳ ಮೂಲರಪಟ್ನದಲ್ಲಿ ಮತ್ತೆ ಮರಳಿನ ಭೂತ:ಸಮಾನ ಮನಸ್ಕ ಪಕ್ಷದ ಫುಡಾರಿಗಳಿಂದ ಮಾಫಿಯಾ ದರ್ಬಾರ್ 

    ಬಂಟ್ವಾಳ, ಮಾರ್ಚ್ 23 : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಲರಪಟ್ಣದಲ್ಲಿ ಹರಿಯುತ್ತಿರುವ ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮತ್ತೆ ಅವ್ಯಾಹತವಾಗಿ ಮುಂದುವರಿದಿದೆ.

    ಈ ಪ್ರದೇಶ ನಾನ್ ಸಿ‌ಆರ್‌ಝಡ್ ವ್ಯಾಪ್ತಿಯಾಗಿದೆ, ಆದರೆ ಅನುಮತಿಯಿಲ್ಲದಿದ್ದರೂ ನಿಯಮ ಬಾಹಿರವಾಗಿ ಮರಳುಗಾರಿಕೆಯನ್ನು ನಡೆಸಲಾಗುತ್ತಿದೆ. ಮರಳುಗಾರಿಕೆಗೆ ಯಂತ್ರೋಪಕರಣಗಳನ್ನು ಬಳಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಆದರೆ, ಇಲ್ಲಿ ಮಾತ್ರ ಟಿಪ್ಪರ್‌ಗಳಿಗೆ ಮರಳು ತುಂಬಿದಲು ಜೆಸಿಬಿಗಳನ್ನು ಬಳಸಲಾಗುತ್ತಿದ್ದು, ದಿನಕ್ಕೆ 200 ಲೋಡ್‌ನಷ್ಟು ಮರಳು ಇಲ್ಲಿಂದ ಸಾಗಿಸಲಾಗುತ್ತಿದೆ ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಹಿಂದೆ ಹಲವು ಬಾರಿ ಮೂಲರಪಟ್ಣ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಬೋಟ್ ಹಾಗೂ ಟಿಪ್ಪರ್‌ಗಳನ್ನು ವಶಪಡಿಸಿಲಾಗಿತ್ತು. ಆದರೆ, ಅಕ್ರಮ ಮರಳುಗಾರಿಕೆ ಮತ್ತೆ ಮುಂದುವರಿದಿದ್ದು, ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಾ ಸಾಥ್ ನೀಡುತ್ತಿದ್ದಾರೆ ಎನ್ನಲಾಗಿದೆ.

    ಈ ಅಕ್ರಮ ಮರಳುಗಾರಿಕೆಯಿಂದ ರೋಸಿ ಹೋಗಿರುವ ಸ್ಥಳೀಯರು ಮೊಬೈಲ್ ಮೂಲಕ ರೆಕಾರ್ಡ್ ಮಾಡಿ ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.ಈ ಮರಳು ಮಾಫಿಯದ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಇಬ್ಬರು ಕೂಡ ಸಮಾನ ಮನಸ್ಕರಾಗಿ ಬಂದದನ್ನು ಹಂಚಿ ತಿನ್ನುವ ಮನೋಭಾವನೆ ಇಟ್ಕೊಂಡಿದ್ದಾರೆ. ಆದ್ದರಿಂದ ಇದನ್ನು ನಿಯಂತ್ರಿಸ ಬೇಕಾದ ಜಿಲ್ಲಾಡಳಿತ ಕೂಡ ಕಣ್ಮುಚ್ಚಿ ಕೂತಿದೆ. ಇದೇ ಜಾಗದಲ್ಲಿ ಮರಳು ತೆಗೆದ ಪರಿಣಾಮ ನದಿಗೆ ಅಡ್ಡಲಾಗಿ ಕಟ್ಟಿದ ಪ್ರಮುಖ ಸೇತುವೆ ಬಿರುಕು ಬಿಟ್ಟು ಮುರಿದು ಬಿದ್ದು ವರ್ಷವೇ ಕಳೆಯುವ ಹಂತದಲ್ಲಿದ್ದರೂ ಸಂಬಂಧಪಟ್ಟವರು ಯಾಕೆ ಎಚ್ಚೆತ್ತುಕೊಳ್ಳಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಜಿಲ್ಲಾಡಳಿತ ಇದಕ್ಕೆ ಉತ್ತರಿಸಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply