LATEST NEWS
ಗಾಳಕ್ಕೆ ಸಿಕ್ಕ ಬೃಹತ್ ಗಾತ್ರದ ಮುಗುಡು ಮೀನು
ಉಡುಪಿ ಅಕ್ಟೋಬರ್ 2: ಕೊಡವೂರು ಗ್ರಾಮದ ಇಂದ್ರಾಣಿ ನದಿಯಲ್ಲಿ ಬೃಹತ್ ಗಾತ್ರದ ಮೀನೊಂದು ಗಾಳಕ್ಕೆ ಸಿಕ್ಕು ಅಚ್ಚರಿ ಮೂಡಿಸಿದೆ. ಗಾಳಕ್ಕೆ ಸಾಮಾನ್ಯವಾಗಿ ಸಣ್ಣಪುಟ್ಟ ಮೀನುಗಳು ಸಿಗುವುದು ಮಾಮೂಲು. ಆದರೆ ಇಂದು ಸುಮಾರು 10 ಕೆಜಿ ತೂಕದ ಮುಗುಡು ಮೀನು ಗಾಳಕ್ಕೆ ಸಿಕ್ಕಿರುವುದು ಗಾಳ ಹಾಕಿದವನಿಗೂ ಖುಷಿಕೊಟ್ಟಿದೆ.
ಸುಮಾರು ಮೂರುವರೆ ಅಡಿ ಉದ್ದ ಇರುವ ಈ ಮೀನನ್ನು ತುಳುವಿನಲ್ಲಿ ಮುಗುಡು ಮೀನು ಎಂದು ಕರೆದರೆ ಇಂಗ್ಲಿಷ್ನಲ್ಲಿ ಕ್ಯಾಟ್ ಫಿಶ್ ಎನ್ನುತ್ತಾರ. ಬೆಕ್ಕಿನ ತರಹ ಮೀಸೆಯನ್ನು ಹೊಂದಿರುವ ಮೀನು ಕನ್ನಡದಲ್ಲಿ ಬೆಕ್ಕುಮೀನು ಎಂದು ಜನಜನಿತವಾಗಿದೆ. ಕೆರೆಯಲ್ಲಿ ಹೆಚ್ಚಾಗಿ ಸಿಗುವ ಈ ಸಿಹಿ ನೀರ ಮೀನು ತನ್ನ ರುಚಿಯಿಂದಲೇ ಕರಾವಳಿಯಲ್ಲಿ ಫೇಮಸ್ಸಾಗಿದೆ. ನಗರ ಪ್ರದೇಶದಲ್ಲಿ ಈ ಮೀನಿಗೆ ಒಳ್ಳೆ ಬೆಲೆ ಕೊಟ್ಟು ಕೊಂಡುಕೊಳ್ಳುವರಿದ್ದಾರೆ. ಸದ್ಯ ಗಾಳಕ್ಕೆ ಸಿಕ್ಕಿರುವ ಈ ಮೀನನ್ನು ಮೂರ್ನಾಲ್ಕು ಮನೆಯವರು ಹಂಚಿಕೊಂಡಿದ್ದಾರೆ.
Video: