LATEST NEWS
ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಸಚಿವ ಖಾದರ್ ಗೆ ಬಿಗ್ ಬಾಸ್ ಪ್ರಥಮ್ ನಿಂದ ಬಹಿರಂಗ ಅಹ್ವಾನ

ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಸಚಿವ ಖಾದರ್ ಗೆ ಬಿಗ್ ಬಾಸ್ ಪ್ರಥಮ್ ನಿಂದ ಬಹಿರಂಗ ಅಹ್ವಾನ
ಮಂಗಳೂರು, ಜನವರಿ 15 : ಮುಸ್ಲೀಮರನ್ನು ಅನುಮಾನದಿಂದ ನೋಡಲಾಗುತ್ತಿದೆ ಎಂದು ಆಹಾರ ಸಚಿವ ಯು.ಟಿ ಖಾದರ್ ಅವರ ಹೇಳಿಕೆಗೆ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಯು.ಟಿ. ಖಾದರ್ ಅವರಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಬಹಿರಂಗ ಅಹ್ವಾನ ನೀಡಿದ್ದಾನೆ.
ನಿಮಗೆ ಅಲ್ಲಿ ಅವಮಾನ, ಅನುಮಾನ ಆಗ್ತಿದ್ದರೆ ನೀವು ಯಾವುದೇ ಧರ್ಮಕ್ಕೆ ಮಾತಾಂತರ ಆಗಿ ಬಿಡಿ, ಯಾಕೆ ಪಾಪ ಕಷ್ಟಪಟ್ಟು ಮುಸ್ಲೀಂ ಆಗ್ತಿದ್ದಿರಾ ?

ಭಾರತದಲ್ಲಿ ಯಾರು ಯಾವ ಧರ್ಮಕ್ಕೆ ಬೇಕಾದರೂ ಮತಾಂತರ ಆಗಬಹುದು.
ನೀವು ಹಿಂದೂ ಧರ್ಮಕ್ಕೆ ಬರೋದಾದ್ರೇ ಬನ್ನಿ.
ಆದರೆ ಕಂಡೀಶನ್ ಮೇಲೆ. ನಿಮ್ಮ ಜೊತೆ ಸೆಲ್ಫಿ ತೆಗೆಂದುಕೊಂಡಿದ್ದರಲ್ಲ ಆ ಕೆಲವು ಅರೋಪಿಗಳು.
ಅವರಿಗೆ ನೋ ಎಂಟ್ರೀ…… ಇದು ಮೋಸ್ಟ್ ಇಂಪಾರ್ಟೆಂಟ್.
ಪೇಜಾವರ ಶ್ರೀ ಗಳ ಆಶೀರ್ವಾದ ಪಡೆದುಕೊಂಡು, ನಡೆದಾಡುವ ದೇವರ ಪಾದಕ್ಕೆ ವಂದಿಸಿ, ನಿರ್ಮಲಾನಂದರ ಹಿತ ವಚನ ಆಲಿಸಿ ಆ ಮೇಲೆ ಹಿಂದೂ ಧರ್ಮಕ್ಕೆ ಬನ್ನಿ ಎಂದು ಫೇಸ್ ಬುಕ್ ಪೇಜಿನಲ್ಲಿ ಪ್ರಥಮ್ ಬರೆಯುವ ಮೂಲಕ ಟಾಂಗ್ ಕೊಟ್ಟಿದ್ದಾನೆ.
ಇನ್ನು ಹಿಂದೂ ಧರ್ಮದಲ್ಲಿ ಯಾವ ಜಾತಿಗೆ ಸೇರಿಬೇಕೆಂದುಕೊಂಡಿದ್ದೀರೋ ಆ ಆಯ್ಕೆ ನಿಮಗೆ ಬಿಟ್ಟಿದ್ದು.
ನಾನು ಗ್ಯಾರಂಟಿ ಕೊಡ್ತೀನಿ. ಹಿಂದೂ ಧರ್ಮದಲ್ಲಿ ಯಾರು ನಿಮ್ಮನ್ನು ಅನುಮಾನದಿಂದ ನೋಡಲ್ಲ.
ಆರಾಮವಾಗಿ ಬನ್ನಿ ಖಾದರ್ ಅವ್ರೇ ಅಂತ ಪ್ರಥಮ್ ಬರೆದಿದ್ದಾರೆ.