Connect with us

    LATEST NEWS

    ಬ್ರಹ್ಮಾವರ – ಐಟಿ ಅಧಿಕಾರಿಗಳ ರೀತಿ ಉದ್ಯಮಿ ಮನೆಗೆ ಎಂಟ್ರಿ ಕೊಟ್ಟ ಅಪರಿಚಿತರು

    ಬ್ರಹ್ಮಾವರ ಜುಲೈ 29: ಸಿನೆಮಾ ಸ್ಟೈಲ್ ಮಾದರಿಯಲ್ಲಿ ಕಾರಿನಲ್ಲಿ ಬಂದ ಅಪರಿಚಿತರು ಉದ್ಯಮಿಯೊಬ್ಬರ ಮನೆಗೆ ನುಗ್ಗಲು ಯತ್ನಿಸಿದ ಘಟನೆ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದಲ್ಲಿ ನಡೆದಿದೆ.


    ಕವಿತಾ ಎಂಬುವರ ನಿವಾಸಕ್ಕೆ ಸುಮಾರು 6-8 ಜನರು ನುಗ್ಗಿ ದಾಂಧಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜುಲೈ 25ರ ಬೆಳಗ್ಗೆ 8.30ರ ಸುಮಾರಿಗೆ ಯಾರೋ ಕವಿತಾ ಅವರ ಮನೆ ಬಾಗಿಲು ತಟ್ಟಿದ್ದಾರೆ. ಆದರೆ, ಕವಿತಾ ಅವರು 9 ಗಂಟೆ ಸುಮಾರಿಗೆ ಬಾಗಿಲು ತೆರೆದು ಹೊರಗೆ ಬಂದು ನೋಡಿದಾಗ ಯಾರು ಇರಲಿಲ್ಲ.

    ಬಳಿಕ, ಮನೆಯ ಸಿಸಿಟಿವಿ ದೃಶ್ಯಗಳನ್ನು ಮೇಲ್ವಿಚಾರಣೆ ಮಾಡುವ ಸೈನ್​ ಇನ್​ ಸೆಕ್ಯುರಿಟಿಯು ಕವಿತಾ ಅವರಿಗೆ ಕರೆ ಮಾಡಿದ್ದಾರೆ. 6-8 ಜನರ ಇನ್ನೋವಾ, ಸ್ವಿಫ್ಟ್ ಕಾರಿನಲ್ಲಿ ಮನೆ ಬಳಿ ಬಂದಿದ್ದರು. ಬಳಿಕ ಕಾಂಪೌಂಡ್ ಹಾರಿ ಮನೆಯ ಆವರಣ ಪ್ರವೇಶೀಸಿದ್ದರು. ನಂತರ ಬಾಗಿಲು ಬಡಿದು ಮನೆಯವರನ್ನ ಕರೆದಿದ್ದಾರೆ. ಆದರೆ, ಮನೆ ಬಾಗಿಲು ತೆರೆಯದಿದ್ದರಿಂದ ಕಿಟಕಿಗಳನ್ನು ತೆರೆಯಲು ಯತ್ನಿಸಿದ್ದರು. ಆದರೆ, ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಪಸ್​ ಹೋದರು. ಹೋಗುವಾಗ ಗೇಟ್​ಗೆ ಹಾನಿ ಮಾಡಿದ್ದಾರೆ ಎಂದು ಸೈನ್​ ಇನ್​ ಸೆಕ್ಯೂರಿಟಿ ಮಾಹಿತಿ ನೀಡಿದ್ದಾರೆ. ತಂಡ ಐಟಿ ಅಧಿಕಾರಿಗಳಂತೆ ಮನೆಗೆ ಆಗಮಿಸಿತ್ತು. ಜೊತೆಯಲ್ಲಿ ಓರ್ವ ಪೊಲೀಸ್ ಪೇದೆಯೂ ಇದ್ದ ಎಂಬ ಮಾಹಿತಿ ಗೊತ್ತಾಗಿದೆ. ಘಟನೆ ಸಂಬಂಧ ಕೋಟ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *