KARNATAKA
ರಾಮ ಇಲ್ಲ ಎಂದ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ

ಬೆಂಗಳೂರು: ಹಿಂದೂ ದೇವರ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕೋರ್ಟ್ ಗೆ ಆಗಮಿಸಿದ್ದ ಸಾಹಿತಿ ಭಗವಾನ್ ಮೇಲೆ ವಕೀಲೆಯೊಬ್ಬರು ಮಸಿ ಎರಚಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ವಕೀಲೆ ಮೀರಾ ರಾಘವೇಂದ್ರ ಖಾಸಗಿ ದೂರು ದಾಖಲಿಸಿದ್ದರು. ಇಂದು ಈ ಪ್ರಕರಣ ಸಂಬಂಧ ಜಾಮೀನು ವಿಚಾರಣೆಗೆ ಭಗವಾನ್ ಕೋರ್ಟ್‌ಗೆ ಆಗಮಿಸಿದ್ದರು. ಈ ವೇಳೆ ಮೀರಾ ರಾಘವೇಂದ್ರ ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ.
ಇಷ್ಟು ವಯಸ್ಸು ಆಗಿದೆ. ಇನ್ನು ನಾಚಿಕೆಯಾಗಲ್ವಾ? ರಾಮನ ಬಗ್ಗೆ ಧರ್ಮದ ಬಗ್ಗೆ ಮಾತಾನಾಡ್ತೀರಾ ಅಂತಾ ಮಸಿ ಬಳಿದು ಮೀರಾ ಅವಾಜ್ ಹಾಕಿದ್ದಾರೆ. ನಾನು ಏನೇ ಬಂದ್ರೂ ಎದುರಿಸಲು ರೆಡಿ ಎಂದು ಮೀರಾ ಹೇಳಿದ್ದಾರೆ.
ಬುದ್ಧಿಜೀವಿ, ಧರ್ಮ ವಿರೋಧಿ ಪ್ರೊ ಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು. ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆ. ಜೈಶ್ರೀರಾಮ್ ಎಂದು ಮೀರಾ ರಾಘವೇಂದ್ರ ಟ್ವೀಟ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಹಿಂದೂ ಧರ್ಮವೆಂಬುದೆ ಇಲ್ಲ. ಹಿಂದೂ ಧರ್ಮ ಅವಮಾನಕಾರ. ಮಾನ ಮರ್ಯಾದೆ ಇದ್ದವರು ಹಿಂದೂ ಧರ್ಮ ಬಳಸಬಾರದು ಎಂದು ಭಗವಾನ್ ಹೇಳಿಕೆ ನೀಡಿದ್ದರು. ಈ ಸಂಬಂಧ 2020ರ ಅಕ್ಟೋಬರ್ 10 ರಂದು ಭಗವಾನ್ ವಿರುದ್ಧ ಮೀರಾ ರಾಘವೇಂದ್ರ ಕ್ರಿಮಿನಲ್ ಕೇಸ್ ಹೂಡಿದ್ದರು.