KARNATAKA
ಅಪರಿಚಿತರೊಂದಿಗೆ ಪಾರ್ಟಿ,ಜಾಲಿರೈಡ್,ಪಿಕಪ್ ಡ್ರಾಪ್ ಅಂತಾ ಹೋಗೋರು ಎಚ್ಚರ, ಬೆಂಗ್ಳೂರಲ್ಲಿ ಡ್ರಾಪ್ ಕೇಳಿದ ಯುವತಿ ಮೇಲೆರಗಿದ ಕಾಮುಕ..!
ಬೆಂಗಳೂರು : ಅಪರಿಚಿತರೊಂದಿಗೆ ಪಾರ್ಟಿ,ಜಾಲಿರೈಡ್,ಪಿಕಪ್ ಡ್ರಾಪ್ ಅಂತಾ ಹೋಗೋರು ಎಚ್ಚರ ವಹಿಸಬೇಕಿದೆ ಯಾಕೆಂದ್ರೆ ಬೆಂಗ್ಳೂರಲ್ಲಿ ಡ್ರಾಪ್ ಕೇಳಿದ ಯುವತಿ ಮೇಲೆ ಕಾಮುಕನೊಬ್ಬ ಎರಗಿದ ಘಟನೆ ನಡೆದಿದೆ.
ಮಧ್ಯರಾತ್ರಿ ಅಪರಿಚಿತನ ಬೈಕ್ ನಲ್ಲಿ ಡ್ರಾಪ್ ಕೇಳಿದ ಯುವತಿಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಕೊನೆಯ ವರ್ಷದ ಪದವಿ ಓದ್ತಿರುವ 21 ವರ್ಷದ ಯುವತಿ ಕೋರಮಂಗಲಕ್ಕೆ ಸ್ನೇಹಿತನ ಜೊತೆಗೆ ಪಾರ್ಟಿಗೆ ಹೋಗಿದ್ದಾಳೆ. ರಾತ್ರಿ ಹನ್ನೊಂದುವರೇ ತನಕ ಪಾರ್ಟಿ ಮಾಡಿದ ಇಬ್ಬರು ಪಬ್ ನಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಯುವತಿ- ಯುವಕ ಹೋಗುತ್ತಿದ್ದ ಬೈಕ್ ಗೆ ಆಟೋವೊಂದು ಟಚ್ ಆಗಿ ಇಬ್ಬರ ನಡುವೆ ಗಲಾಟೆ ಶುರುವಾಗಿ ದೆ. ಅದಾಗದಲೇ ಕುಡಿದ ನಶೆಯಲ್ಲಿದ್ದ ಯುವತಿ ಆತನನ್ನು ಬಿಟ್ಟುಅದೇ ರಸ್ತೆಯಲ್ಲಿ ಬರ್ತಿದ್ದ ಬೈಕ್ ಸವಾರನಿಗೆ ಮನೆಗೆ ಹೋಗಲು ಡ್ರಾಪ್ ಕೇಳಿದ್ದಾಳೆ. ಬೈಕ್ ನಲ್ಲಿ ಸ್ವಲ್ಪ ದೂರ ತೆರಳಿದ ಬಳಿಕ ಆ ಬೈಕ್ ನಿಂದ ಇಳಿದು ಮತ್ತೊಂದು ಬೈಕ್ ನಲ್ಲಿ ಡ್ರಾಪ್ ಪಡೆದಿದ್ದಾಳೆ. ಯುವತಿ ಮದ್ಯದ ನಶೆಯಲ್ಲಿ ತೆಳುತ್ತಿದ್ದನ್ನು ಗಮನಿಸಿದ ಆ ಅಪರಿಚಿತ ಆಸಾಮಿ ಬೊಮ್ಮನಹಳ್ಳಿ ಸಮೀಪದ ಲಾರಿ ನಿಲ್ಲಿಸುವ ನಿರ್ಜನ ಜಾಗಕ್ಕೆ ಕರೆದೊಯ್ದು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆಕೆ ಪ್ರತಿರೋಧ ಒಡ್ಡಿದ್ದು ಮೊಬೈಲ್ ನಲ್ಲಿ ಎಮರ್ಜೆನ್ಸಿ SOS ಬಟನ್ ಒತ್ತಿದ್ದಾಳೆ. ತಕ್ಷಣ ಮಾಹಿತಿ ಸ್ನೇಹಿತರಿಗೆ ಹೋಗಿದ್ದರಿಂದ ಸ್ನೇಹಿತರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.ನಿರ್ಜನ ಪ್ರದೇಶದಲ್ಲಿ ಯುವತಿ ಬೆತ್ತಲೆಯಾಗಿ ಲಾರಿಯ ಹಿಂಭಾಗದಲ್ಲಿ ಬಿದ್ದಿದ್ದು,ಆಕೆಯ ಮೇಲೆ ಒಂದು ರೆಡ್ ಜಾಕೆಟ್ ಇದ್ದಿದ್ದು ಕಂಡಿದೆ. ಸ್ನೇಹಿತರು ತಮ್ಮ ಬಟ್ಟೆಯಿಂದ ಅಸ್ವಸ್ಥಗೊಂಡಿದ್ದ ಆಕೆಯ ಮೈ ಮುಚ್ಚಿ ಕಾರ್ ನಲ್ಲಿ ಮಲಗಿಸಿ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ಬೊಮ್ಮಸಂದ್ರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಘ ಟನೆ ಬಗ್ಗೆ ಬಿಎನ್ಎಸ್ ಕಾಯ್ದೆ 64 ಅಡಿಯಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
You must be logged in to post a comment Login