KARNATAKA
ವ್ಲಾಗ್ ಮಾಡುವ ವೇಳೆ ಯುವತಿಯ ಎದೆಗೆ ಕೈ ಹಾಕಿದ ಅಪ್ರಾಪ್ತ ಬಾಲಕ – ಕಣ್ಣಿರಿಟ್ಟ ಯುವತಿ
ಬೆಂಗಳೂರು ನವೆಂಬರ್ 07: ಮಂಗಳವಾರ ರಾತ್ರಿ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದಾಗ 10 ವರ್ಷದ ಬಾಲಕ ತನಗೆ ಕಿರುಕುಳ ನೀಡಿದ್ದಾನೆ ಎಂದು ಬೆಂಗಳೂರು ಮೂಲದ ವ್ಲಾಗರ್ ಯುವತಿಯೊಬ್ಬಳು ವಿಡಿಯೋ ಮಾಡಿ ಆರೋಪಿಸಿದ್ದಾರೆ.
ನೇಹಾ ಬಿಸ್ವಾಲ್ ಇಡೀ ಘಟನೆಯನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. ತಾನು ಬಿಟಿಎಂ ಲೇಔಟ್‌ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವೀಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಎದುರಿನಿಂದ ಬಂದ ಹುಡುಗನೊಬ್ಬ ನನ್ನ ಎದೆಗೆ ಕೈ ಹಾಕಿ ಅನುಚಿತವಾಗಿ ಮುಟ್ಟಿದ್ದಾನೆ ಎಂದು ಹೇಳಿದ್ದು, ಆ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಾನು ನಡೆಯುವಾಗ ವೀಡಿಯೊ ಮಾಡುತ್ತಿದ್ದೆ, ಈ ಹುಡುಗ ಆರಂಭದಲ್ಲಿ ಅದೇ ದಿಕ್ಕಿನಲ್ಲಿ ಸವಾರಿ ಮಾಡುತ್ತಿದ್ದನು ನಂತರ ಅವನು ನನ್ನನ್ನು ನೋಡಿದನು, ಯು-ಟರ್ನ್ ಮಾಡಿ ನನ್ನ ಕಡೆಗೆ ಬರಲು ಪ್ರಾರಂಭಿಸಿದನು,” ಮೊದಲು ನನ್ನನ್ನು ಗೇಲಿ ಮಾಡಿದ ಅವನು ಬಳಿಕ ನನ್ನ ಹತ್ತಿರ ಬಂದು ಎದೆ ಸ್ಪರ್ಶಿಸಿದ್ದಾನೆ. ಈ ವೇಳೆ ನಾನು ಆತನನ್ನು ಹಿಡಿದುಕೊಂಡು ಸರಿಯಾಗಿ ಪೆಟ್ಟುಕೊಟ್ಟಿದ್ದೆನೆ ಎಂದ ಅವರು, ಈ ವೇಳೆ ಬಂದ ಸ್ಥಳೀಯರು ಬಾಲಕ ಎಂದು ಬಿಟ್ಟು ಬೀಡಲು ಹೇಳಿದರು ಎಂದಿದ್ದಾರೆ. ಈ ವೇಳೆ ನಾನು ಹುಡುಗ ಮಾಡಿರುವ ವಿಡಿಯೋ ತೋರಿಸದ ವೇಳೆ ಕೆಲವರು ಆತನಿಗೆ ಪೆಟ್ಟು ನೀಡಿದ್ದಾರೆ.
ಮುಂದಿನ ವೀಡಿಯೊದಲ್ಲಿ , Ms ಬಿಸ್ವಾಲ್ ಅವರು ಔಪಚಾರಿಕ ದೂರನ್ನು ದಾಖಲಿಸಿಲ್ಲ ಎಂದು ಹೇಳಿದರು, “ನಾನು ಎಫ್‌ಐಆರ್ ದಾಖಲಿಸಿಲ್ಲ ಏಕೆಂದರೆ ಮಗು ಭಾಗಿಯಾಗಿದೆ ಮತ್ತು ಅವನ ಭವಿಷ್ಯವನ್ನು ಹಾಳುಮಾಡಲು ನಾನು ಬಯಸುವುದಿಲ್ಲ ಎಂದಿದ್ದಾರೆ. ಆದರೆ ಬೆಂಗಳೂರು ಪೊಲೀಸರು ಪ್ರಕರಣವನ್ನು ದಾಖಲಿಸಿ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
An Instagram user, @nehabiswal120, has reported facing sexual harassment in BTM Layout, Bengaluru. She claims that while she was walking down the street, a boy on a bicycle approached her, greeted her with a “hi,” and then inappropriately touched her before quickly fleeing the… pic.twitter.com/R6qXDnVUc8
— Karnataka Portfolio (@karnatakaportf) November 6, 2024