Connect with us

    KARNATAKA

    ಯುವತಿ ಎದುರು ಹಸ್ತಮೈಥುನ, ಲೈಂಗಿಕ ಕಿರುಕುಳ ನೀಡಿದ ಇಬ್ಬರು ಕಿರಾತಕರ ‘ತುರಿಕೆ’ ತೆಗೆದ ಬೆಂಗಳೂರು ಪೊಲೀಸರು..!

    ಬೆಂಗಳೂರು: ವಿಜಯನಗರ ಮತ್ತು ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾದ 2 ಪ್ರತ್ಯೇಕ ಘಟನೆಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.


    ಯುವತಿಯಿದ್ದ ಕಾರಿನ ಎದುರು ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಮಹಾದೇವ ಪುರ ಪೊಲೀಸರು ಬಂಧಿಸಿದ್ದಾರೆ.ಭಾರತೀನಗರ ನಿವಾಸಿ ಸುನೀಲ್‌ ಕುಮಾರ್‌ ಶರ್ಮಾ(26) ಬಂಧಿತ.ಆರೋಪಿ ನಗರದಲ್ಲಿ ಹೌಪ್‌ಕೀಪಿಂಗ್‌ ನೌಕರ. ಜ. 5ರ ರಾತ್ರಿ ಸಂತ್ರಸ್ತೆ ಸ್ನೇಹಿತರ ಜತೆ ಊಟಕ್ಕೆಂದು ಹೋಟೆಲ್‌ಗೆ ಹೋಗಿದ್ದು, ಬಳಿಕ ಮಹಾದೇವ ಪುರದ ಬಾಗಮನೆ ಟೆಕ್‌ ಪಾರ್ಕ್‌ ಸಮೀಪದ ಸರ್ವೀಸ್‌ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡಿದ್ದರು. ಕಾರಿನ ಎದುರು ಬಂದ ಆರೋಪಿ ಯುವತಿಯನ್ನು ಕಂಡು, ಕಾರಿನ ಮುಂಭಾಗ ಬಂದು ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಈತನ ವರ್ತನೆಗೆ ಹೆದರಿದ ಆಕೆ ಕೂಡಲೇ ಕಾರಿನ ಡೋರ್‌ ಲಾಕ್‌ ಮಾಡಿಕೊಂಡು ಅಲ್ಲಿಂದ ಹೊರಡಲು ಮುಂದಾಗಿದ್ದಾರೆ. ಆದರೆ, ಹಿಂದೆ ಕಾರಿದ್ದ ಕಾರಣ ಆಕೆ ಅಲ್ಲಿಂದ ಹೋಗಲಾಗಿಲ್ಲ. ಅಲ್ಲದೆ, ಆತ ಹಸ್ತಮೈಥುನ ಮಾಡಿಕೊಂಡೆ, ಕಾರಿನ ಸುತ್ತಲು ಓಡಾಡಿದ್ದಾನೆ. ಅದರಿಂದ ಇನ್ನಷ್ಟು ಗಾಬರಿಗೊಂಡ ಆಕೆ, ಕಾರಿನಲ್ಲೇ ಅವಿತುಕೊಂಡು ಸ್ನೇಹಿತರಿಗೆ ಫೋನ್‌ ಮಾಡಿ ಮಾಡಿ ಕರೆಸಿಕೊಂಡಿದ್ದರು. ಅವರೆಲ್ಲರೂ ಬರುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದ. ಈ ಸಂಬಂಧ ಸಂತ್ರಸ್ತೆ ಹಾಗೂ ಸ್ನೇಹಿತರು ಎಕ್ಸ್‌ನಲ್ಲಿ ಘಟನೆಯನ್ನು ಪೋಸ್ಟ್‌ ಮಾಡಿ, ಕ್ರಮಕ್ಕೆ ಒತ್ತಾಯಿಸಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
    ಮತ್ತೊಂದು ಪ್ರಕರಣದಲ್ಲಿ, ಡಿಸೆಂಬರ್ 30, 2023 ರಂದು ಹೋಟೆಲ್‌ನಲ್ಲಿ ಮಹಿಳಾ ಗ್ರಾಹಕಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಗೃಹಬಳಕೆಯ ಗ್ಯಾಸ್ ಡೆಲಿವರಿ ಏಜೆಂಟ್‌ನನ್ನು ವಿಜಯನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ಘಟನೆಯ ಸಿಸಿಟಿವಿ ಮತ್ತು ವಿಡಿಯೊ ದೃಶ್ಯಾವಳಿಗಳು ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿತ್ತು. ಸಂತ್ರಸ್ತೆ ಕ್ಯಾಶ್ ಕೌಂಟರ್ ಬಳಿ ಇದ್ದಾಗ ಅವರನ್ನು ಮುಟ್ಟುವಂತೆ ಸ್ನೇಹಿತರು ಸವಾಲು ಎಸೆದರು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಸಂತ್ರಸ್ತೆ ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದರು. ಪೊಲೀಸರು ಹೋಟೆಲ್ ಮ್ಯಾನೇಜರ್ ನಿಂದ ದೂರನ್ನು ಸ್ವೀಕರಿಸಿ ಕಾರ್ಯಾಚರಣೆ ನಡೆಸಿದ್ದರು.
    ಬಂಧಿತ ಆರೋಪಿಯನ್ನು ಆರ್‌ಪಿಸಿ ಲೇಔಟ್‌ನ ಹಂಪಿ ನಗರದ ನಿವಾಸಿ ಚಂದನ್ ಎಂದು ಗುರುತಿಸಲಾಗಿದ್ದು, ಹೊಟೇಲ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿ ಮಹಿಳೆಯ ಬಳಿ ಬಂದು ಹಿಂಬದಿಯಿಂದ ಆಕೆಯನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ಕಿರುಕುಳದ ನಂತರ ಅವರ ಸ್ನೇಹಿತರು ಶಿಳ್ಳೆ ಹೊಡೆದಿದ್ದಾರೆ ಎಂದು ವರದಿಯಾಗಿದೆ. ಘಟನೆ ಬಳಿಕ ಸಂತ್ರಸ್ತೆ ಆರೋಪಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ಜನರು ಜಮಾಯಿಸಲು ಆರಂಭಿಸಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದರು. ಇದೀಗ ಪೊಲೀಸರು ಈತನನ್ನು ಬಂಧಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply