Connect with us

KARNATAKA

ಬೆಂಗಳೂರು: ಹುಚ್ಚುಪ್ರೇಮಿಯೊಬ್ಬನ ಕ್ರೌರ್ಯಕ್ಕೆ ಯುವತಿ ಬಲಿ

ಬೆಂಗಳೂರು, ಮಾರ್ಚ್ 01: ಹುಚ್ಚುಪ್ರೇಮಿಯೊಬ್ಬನ ಕ್ರೌರ್ಯಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಆರೋಪಿ 16 ಸಲ ಚುಚ್ಚಿ ಚುಚ್ಚಿ ಕೊಂದಿದ್ದಾನೆ. ಎದೆ, ಹೊಟ್ಟೆ, ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ಈಕೆಯನ್ನು ಪ್ರೀತಿಸುತ್ತಿರುವ ದಿವಾಕರ್​ ಎಂಬಾತ ಕೊಲೆ ಮಾಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಮುರುಗೇಶ್​ಪಾಳ್ಯದಲ್ಲಿ ಈ ಪ್ರಕರಣ ನಡೆದಿದೆ. ಲೀಲಾ ಪವಿತ್ರ (26) ಕೊಲೆಯಾದ ಯುವತಿ. ಆಂಧ್ರಪ್ರದೇಶ ಮೂಲದ ಈಕೆ ಒಮೆಗಾ ಎನ್ನುವ ಮೆಡಿಸನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇಂದು ಕೆಲಸ ಮುಗಿಸಿ ಹೊರಗಡೆ ಬಂದಾಗ ಆರೋಪಿ ಈಕೆಯ ಕೊಲೆ ಮಾಡಿದ್ದಾನೆ.

ಮುರಗೇಶ್ ಪಾಳ್ಯದ ಎನ್​ಎಎಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಎದೆ, ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೆ ಒಟ್ಟು ಸುಮಾರು 16 ಸಲ ಇರಿದು ಕೊಲೆ ಮಾಡಿರುವ ಆರೋಪಿ ಈಗ ಪೊಲೀಸರ ವಶದಲ್ಲಿದ್ದಾನೆ. ಜೀವನ್​ಬಿಮಾನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಇಬ್ಬರೂ ಐದು ವರ್ಷಗಳಿಂದ ಪ್ರೀತಿಸುತ್ತಿದ್ದು, ಅಂತರ್ಜಾತಿ ವಿವಾಹಕ್ಕೆ ಮನೆಯವರ ವಿರೋಧವಿತ್ತು. ಅದೇ ಕಾರಣಕ್ಕೆ ಯುವತಿ ಯುವಕನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಬೇಸತ್ತ ಯುವಕ ಈ ಕೃತ್ಯ ಎಸಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

Advertisement
Click to comment

You must be logged in to post a comment Login

Leave a Reply