Connect with us

    KARNATAKA

    ಬೆಂಗಳೂರು – ಡ್ರಾಪ್ ಕೇಳಿದ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಕೊರಿಯೋಗ್ರಾಫರ್ ಅರೆಸ್ಟ್

    ಬೆಂಗಳೂರು, ಆಗಸ್ಟ್​.19: ಡ್ರಾಪ್ ಕೇಳಿದ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿಯ ನಿವಾಸದಿಂದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಕೊರಿಯೋಗ್ರಾಫರ್ ಎಂದು ತಿಳಿದು ಬಂದಿದೆ.


    ಕೋರಮಂಗಲ ಪಬ್​ಗೆ ಪಾರ್ಟಿಗೆ ಬಂದಿದ್ದ. ಮನೆಗೆ ತೆರಳುವಾಗ ಯುವತಿ‌ ಡ್ರಾಪ್ ಕೇಳಿದ್ದಾಳೆ. ಯುವತಿ ಕೂಡ ಕೋರಮಂಗಲದ ಪಬ್​ನಲ್ಲಿ ಪಾರ್ಟಿ ಮುಗಿಸಿ ಹೊರಟಿದ್ದಳು. ಇನ್ನು ಡ್ರಾಪ್ ಮಾಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ.

    #REALWARFIGHTER brigadier I N Rai ‘ದೇಶಕ್ಕಾಗಿ ತ್ಯಾಗ ಮಾಡಿದವರ ಮುಂದೆ ನಾನು ಕಿರಿಯ’…! episode 1

    ಆರೋಪಿ ಅತ್ಯಾಚಾರದ ವೇಳೆ ಯುವತಿಯ ಬಟ್ಟೆ ಹರಿದು ದುಷ್ಕೃತ್ಯ ಮೆರೆದಿದ್ದಾನೆ. ಈ ವೇಳೆ ಯುವತಿ ಕೂಡ ಈತನ ಕೃತ್ಯಕ್ಕೆ ಪ್ರತಿರೋಧ ಒಡ್ಡಿದ್ದು ಆತನ ಬಟ್ಟೆ ಹರಿದು, ಮುಖಕ್ಕೆ ಪರಚಿದ್ದಾಳೆ. ಅಲ್ಲದೆ ಇದೇ ವೇಳೆ ಯುವತಿಯ ಸ್ನೇಹಿತರು ಕೂಡ ಸ್ಥಳಕ್ಕೆ ಬಂದಿದ್ದು ಇದರಿಂದ ಹೆದರಿ ಆರೋಪಿ ಮನೆಗೆ ಬಂದಿದ್ದ. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply