Connect with us

    BELTHANGADI

    ಬೆಳ್ತಂಗಡಿ : ಬ್ಯಾನರ್ ಕಟ್ಟುವ ವೇಳೆ ಕರೆಂಟ್ ಶಾಕ್ : ಓರ್ವ ಸಾವು..ಮತ್ತೊಬ್ಬ ಗಂಭೀರ

    ಬೆಳ್ತಂಗಡಿ ನವೆಂಬರ್ 08 : ಬ್ಯಾನರ್ ಕಟ್ಟುವ ವೇಳೆ ಕರೆಂಟ್ ಶಾಕ್ ಹೊಡೆದು ಓರ್ವ ಸಾವನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.


    ಮೃತರನ್ನು ಬೆಳ್ತಂಗಡಿ ಕೋರ್ಟ್ ನಿವಾಸಿ ವ್ಯಾಸರಾಯ ಅಚಾರ್ಯ ಅವರ ಪುತ್ರ ಗೂಡ್ಸ್ ವಾಹನ ಚಾಲಕ ಪ್ರಶಾಂತ್ ಅಚಾರ್ಯ (32) ಸಾವನ್ನಪ್ಪಿದವರು ಹಾಗೂ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ಸಂಜೀವ ಅಚಾರ್ಯ ಅವರ ಮಗನಾದ ಸತೀಶ್(25) ಗಂಭೀರ ಗಾಯಗಾಯಗೊಂಡಿದ್ದಾರೆ.

    ಬಿ.ಎಮ್.ಎಸ್ ಕಾರ್ಮಿಕ ಸಂಘದ ವತಿಯಿಂದ ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ಇಬ್ಬರಿಗೆ ವಿದ್ಯುತ್ ತಂತಿ ಸ್ವರ್ಶಿಸಿ ಗಂಭೀರ ಗಾಯಗೊಂಡಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದರಲ್ಲಿ ಓರ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
    .

    Share Information
    Advertisement
    Click to comment

    Leave a Reply

    Your email address will not be published. Required fields are marked *