KARNATAKA
ಬೆಳಗಾವಿ : ವಿದ್ಯುತ್ ತಂತಿ ತಾಗಿ ತಂದೆ-ಮಗ ದಾರುಣ ಅಂತ್ಯ..!
ಮನೆ ಮುಂದೆ ಬೆಳೆದಿದ್ದ ಹುಲ್ಲು ತೆಗೆಯುವ ವೇಳೆ ವಿದ್ಯುತ್ ತಗುಲಿ ತಂದೆ, ಮಗ ದುರ್ಮರಣ ಹೊಂದಿದ ಘಟನೆ ಬೆಳಗಾವಿಯ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ : ಮನೆ ಮುಂದೆ ಬೆಳೆದಿದ್ದ ಹುಲ್ಲು ತೆಗೆಯುವ ವೇಳೆ ವಿದ್ಯುತ್ ತಗುಲಿ ತಂದೆ, ಮಗ ದುರ್ಮರಣ ಹೊಂದಿದ ಘಟನೆ ಬೆಳಗಾವಿಯ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.
ಕೃಷಿ ಕುಟುಂಬದ ಪ್ರಭು ಹುಂಬಿ (68), ಈತನ ಮಗ ಮಂಜುನಾಥ ಹುಂಬಿ (29) ಮೃತ ದುರ್ವಿಗಳು.
ಮನೆ ಮುಂದಿನ ವಿದ್ಯುತ್ ಕಂಬಕ್ಕೆ ಬ್ಯಾಲೆನ್ಸ್ ಹಾಕಲಾಗಿದ್ದ ತಂತಿಗೆ ಮೇನ್ ಲೈನ್ ವಿದ್ಯುತ್ ತಂತಿ ಜೋಡಿಸಲಾಗಿತ್ತು.ಅಲ್ಲಿ ಬೆಳೆದಿದ್ದ ಹುಲ್ಲು ತೆಗೆಯುವ ವೇಳೆ ತಂದೆ ಪ್ರಭು ಹುಂಬಿಗೆ ವಿದ್ಯುತ್ ತಗುಲಿದೆ.
ಜೋರಾಗಿ ಕೂಗಿದ ತಂದೆಯನ್ನು ನೋಡಿ ಮಗ ಓಡಿ ಬಂದು ತಗುಲಿದ್ದ ವಿದ್ಯುತ್ ಬಿಡಿಸಲು ಧಾವಿಸಿದ.ಈ ವೇಳೆ ಮಗ ಮಂಜುನಾಥ ಹುಂಬಿಗೂ ವಿದ್ಯುತ್ ತಗುಲಿದೆ. ತಂದೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮಂಜುನಾಥನನ್ನು ಆಸ್ಪತ್ರೆಗೆ ದಾಖಿಲಿಸಿ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯಿಂದ ಗ್ರಾಮದಲ್ಲಿ ನಿರವ ಮೌನ ಆವರಿಸಿದೆ.
ಮೃತ ದುರ್ವಿಗಳ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು.ಹೆಸ್ಕಾಂನವರ ದಿವ್ಯ ನಿರ್ಲಕ್ಷ್ಯದಿಂದ ಎರಡು ಜೀವಿಗಳು ಹೋಗಿವೆ. ಇದಕ್ಕೆ ಹೆಸ್ಕಾಂನವರ ನೇರ ಹೊಣೆ ಆಗಿದ್ದಾರೆ ಎಂದು ಆರೋಪಿಸಿದ್ದಾರೆ
ಮನೆ ಮುಂದೆ ಹಾಕಲಾಗಿದ್ದ ವಿದ್ಯುತ್ ಕಂಬ ತೆರುವುಗೊಳಿಸಿ ಎಂದು ಮನವಿ ಮಾಡಿದ್ದರೂ ಗಮನ ಹರಿಸಿರಲಿಲ್ಲ. ಇದರಿಂದ ಜೀವ ಹಾನಿ ಸಂಭವಿಸಿದೆ ಎಂದು ಗ್ರಾಮಸ್ಥರು ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
You must be logged in to post a comment Login