Connect with us

    KARNATAKA

    ಪ್ರೇಯಸಿಯ ಖಾಸಗಿ ಫೋಟೋ ಆಕೆಯ ಗಂಡನಿಗೆ ಕೊಟ್ಟ ಪಾಗಲ್​ ಪ್ರೇಮಿ….!!

    ಬೆಳಗಾವಿ ಫೆಬ್ರವರಿ 23: ಪ್ರಿಯಕರನೊಬ್ಬ ತಾನು ಪ್ರೀತಿಸಿದ ಯುವತಿ ಬೇರೆ ಮದುವೆ ಆಗುತ್ತಿದ್ದಂತೆ ಆಕೆಯ ಗಂಡನಿ ಯುವತಿಯ ಖಾಸಗಿ ಪೋಟೋಗಳನ್ನು ತೋರಿಸಿ ಸಂಸಾರವನ್ನು ಹಾಳು ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಯುವತಿಯ ಬದುಕು ಬೀದಿಗೆ ಬಿದ್ದಿದೆ. ಸಂಸಾರ ಹಾಳು ಮಾಡಿದ ನೀನು, ಈಗಲಾದರೂ ನನ್ನ ಮದುವೆಯಾಗು ಎಂದು ಕಣ್ಣೀರು ಇಡುತ್ತ ಪ್ರಿಯಕರನ ಮನೆ ಮುಂದೆ ಕಣ್ಣೀರು ಇಡುತ್ತ ಪ್ರತಿಭಟನೆ ಮಾಡ್ತಿದ್ದಾಳೆ.


    ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದ ಸೋಮವಾರಪೇಟೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ರೋದನೆ ಮತ್ತು ಆಕ್ರೋಶಕ್ಕೆ ಕಾರಣ ಮಾಜಿ ಪ್ರಿಯಕರ ಮುತ್ತುರಾಜ್ ಬಸವರಾಜ್ ಇಟಗಿ. ಈ ಮುತ್ತುರಾಜ್ ಬಸವರಾಜ್ ಇಟಗಿ ಬರೋಬ್ಬರಿ 6 ವರ್ಷಗಳಿಂದ ಆಕೆಯನ್ನು ಪ್ರೀತಿಸುತ್ತಿದ್ದನಂತೆ. ಆದರೆ ಪ್ರಿಯಕರ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ ಈ ಹಿನ್ನಲೆ ಕುಟುಂಬಸ್ಥರು ಆಕೆಗೆ ಬೇರೆ ಯುವಕನ ಜೊತೆ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಯಾಗಿ 8 ದಿನ ಕಳೆಯುತ್ತಿದ್ದಂತೆಯೇ ಆರೋಪಿ ಮುತ್ತುರಾಜ್, ಆಕೆಯ ಗಂಡನ ಮನೆಗೆ ಎಂಟ್ರಿ ನೀಡಿದ್ದಾನೆ. ಅಲ್ಲಿ ಮದುಮಗನ ಭೇಟಿ ಮಾಡಿ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದ. ಇದನ್ನು ನೋಡಿದ ಹುಡುಗನ ಕಡೆಯವರು, ಜಗಳವಾಡಿ ಆಕೆಯನ್ನು ತವರು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

    6 ವರ್ಷ ಪ್ರೀತಿಸಿದ್ರೂ ಮದುವೆ ಆಗಲಿಲ್ಲ. ಈಗ ನಾನು ಬೇರೆ ಮದುವೆ ಆಗುತ್ತಿದ್ದಂತೆಯೇ ಮನೆ ಮುರಿದು ನನ್ನ ಜೀವನ ಹಾಳು ಮಾಡಿದೆ ಎಂದು ಯುವತಿ ಕಣ್ಣೀರು ಹಾಕುತ್ತಿದ್ದಾಳೆ. ಅಲ್ಲದೇ ನ್ಯಾಯಕ್ಕಾಗಿ ಕಿತ್ತೂರು ಪೊಲೀಸ್ ಠಾಣೆಗೆ ಹೋದರೂ ಪೊಲೀಸರು ದೂರು ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ಮಾಡಿದ್ದಾಳೆ ಎಂದು ಆರೋಪಿಸಿದ್ದಾಳೆ.

    Share Information
    Advertisement
    Click to comment

    You must be logged in to post a comment Login

    Leave a Reply