Connect with us

BANTWAL

ಭಿಕ್ಷುಕರ ಆಶ್ರಯ ತಾಣವಾದ ಬಿಸಿರೋಡ್ ಖಾಸಗಿ ಬಸ್ ನಿಲ್ದಾಣ

ಬಂಟ್ವಾಳ ಜೂನ್ 25: ಪುರಸಭಾ ಇಲಾಖೆಯ ವ್ಯಾಪ್ತಿಯಲ್ಲಿರುವ ಬಿಸಿರೋಡು ಖಾಸಗಿ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ತಂಗುದಾಣ ಈಗ ಭಿಕ್ಷುಕರ ಆಶ್ರಯ ತಾಣವಾಗಿ ಮಾರ್ಪಾಡಾಗಿದೆ.

ಪುರಸಭಾ ಇಲಾಖೆಯ ವಾಣಿಜ್ಯ ಸಂಕೀರ್ಣ ದಲ್ಲಿರುವ ಈ ಪ್ರಯಾಣಿಕರ ತಂಗುದಾಣದೊಳಗೆ ಕಾಲಿಡುವಂತಿಲ್ಲ. ಭಿಕ್ಷುಕರ ದಿನನಿತ್ಯದ ಎಲ್ಲಾ ಚಟುವಟಿಕೆಗಳು ಇಲ್ಲೇ ನಡೆಯುತ್ತದೆ. ಹಾಗಾಗಿ ಜನ ಅತ್ತ ಕಣ್ಣೆತ್ತಿ ನೋಡುವ ರೀತಿಯೂ ಇಲ್ಲ. ಹಗಲು ರಾತ್ರಿಯೆನ್ನದೆ ಬಿಕ್ಷುಕುರ ಗಲಾಟೆ ಮತ್ತು ಶುಚಿತ್ವವಿಲ್ಲದೆ ಸುತ್ತಮುತ್ತ ದುರ್ವಾಸನೆ ಬೀರುತ್ತಿದೆ.

ಖಾಸಗಿ ಬಸ್ ನಿಲ್ದಾಣದಲ್ಲಿ ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಬಂಟ್ವಾಳ ಪುರಸಭೆ ಮಾತ್ರ ಇತ್ತ ಕಡೆ ಸುಳಿಯುತ್ತಿಲ್ಲ! ತಮಗೆ ಸಂಬಂಧ ಇಲ್ಲದಂತೆ ತಮ್ಮ ಪಾಡಿಗೆ ತಾವಿದ್ದು ಬಿಟ್ಟಿದ್ದಾರೆ. ಬಿಕ್ಷುಕರಿಗೆ ಸೂಕ್ತ ವ್ಯವಸ್ಥೆ ಮಾಡಿ, ಪುನರ್ವಸತಿ ನೀಡುವ ಕೆಲಸ ಇಲಾಖೆ ಮಾಡಬೇಕು. ಈ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಆಗೋದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.