LATEST NEWS
ತೊಕ್ಕೊಟ್ಟು ಒಳಪೇಟೆಯಲ್ಲಿ ತಾತ್ಕಾಲಿಕವಾಗಿ ವಹಿವಾಟು ನಡೆಸುತ್ತಿದ್ದ ಬೀಫ್ ಸ್ಟಾಲ್ ಗಳಿಗೆ ಬೆಂಕಿ
ಮಂಗಳೂರು ಜನವರಿ 9: ತೊಕ್ಕೊಟ್ಟು ಒಳಪೇಟೆಯಲ್ಲಿ ರೈಲ್ವೇ ಇಲಾಖೆಯ ಪ್ರದೇಶದಲ್ಲಿ ತಾತ್ಕಾಲಿಕವಾಗಿ ವಹಿವಾಟು ನಡೆಸುತ್ತಿದ್ದ ಮೂರು ಬೀಫ್ ಸ್ಟಾಲ್ ಗಳಿಗೆ ಕಿಡಿಗೇಡಿಗಳು ನಿನ್ನೆ ರಾತ್ರಿ ಬೆಂಕಿ ಕೊಟ್ಟಿದ್ದಾರೆ.
ಖಾದರ್, ಅಬ್ದುಲ್ಲ, ಹನೀಪ್ ಎಂಬವರಿಗೆ ಸೇರಿದ ಬೀಫ್ ಸ್ಟಾಲ್ ಗಳು ಇದಾಗಿದ್ದು, ಒಳಪೇಟೆಯಲ್ಲಿ ಹಳೆಯ ಮಾರುಕಟ್ಟೆ ಇದ್ದ ಸಂದರ್ಭದಲ್ಲಿ ಈ 3 ಸ್ಟಾಲ್ ಗಳು ಮಾರುಕಟ್ಟೆ ಒಳಗಡೆ ವಹಿವಾಟು ನಡೆಸುತ್ತಿದ್ದವು. ಇದೀಗ ಹಳೆ ಮಾರುಕಟ್ಟೆ ನವೀಕರಣ ಕಾಮಗಾರಿ ನಡೆಯುತ್ತಿದ್ದು ಮೂರು ಭೀಪ್ ಸ್ಟಾಲ್ ಗಳು ಮಾರುಕಟ್ಟೆಯ ಪಕ್ಕದ ರೈಲ್ವೇ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ವಹಿವಾಟು ನಡೆಸುತ್ತಿದ್ದವೆನ್ನಲಾಗಿದೆ.
ಅಕ್ರಮ ಭೀಪ್ ಸ್ಟಾಲ್ ಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಎರಡು ದಿವಸಗಳ ಹಿಂದಷ್ಟೆ ವಿಶ್ವ ಹಿಂದು ಪರಿಷತ್, ಬಜರಂಗದಳದ ಪ್ರಮುಖರು ಉಳ್ಳಾಲ ನಗರಸಭೆ ಆಯುಕ್ತರು ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಕಿಡಿಗೇಡಿಗಳು ಬೀಫ್ ಸ್ಟಾಲ್ ಗಳಿಗೆ ನಿನ್ನೆ ರಾತ್ರಿ ಬೆಂಕಿ ನೀಡಿದ್ದು ,ಈ ಬಗ್ಗೆ ಭೀಪ್ ಸ್ಟಾಲ್ ಮಾಲಕರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ