LATEST NEWS
ಬಶೀರ್ ಮಾರಣಾಂತಿಕ ಹಲ್ಲೆ ಪ್ರಕರಣ,ನಾಲ್ವರು ವಶಕ್ಕೆ : ದೇವರ ಮೊರೆ ಹೋದ ಬಷೀರ್ ಕುಟುಂಬ
ಬಶೀರ್ ಮಾರಣಾಂತಿಕ ಹಲ್ಲೆ ಪ್ರಕರಣ : ನಾಲ್ವರು ವಶಕ್ಕೆ
ಮಂಗಳೂರು,ಜನವರಿ 06 : ಬುಧವಾರ ರಾತ್ರಿ ಮಾರಕಾಯುಧಗಳಿಂದ ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ಆಕಾಶ ಭವನದ ಬಶೀರ್ ಆರೋಗ್ಯ ಸ್ಥಿತಿ ತುಸು ಚೇತರಿಕೆ ಕಂಡು ಬಂದಿದ್ದರೂ ಗಂಭೀರವಾಗಿಯೇ ಇದೆ.
ಬಶೀರ್ ಅವರ ತಲೆ ಮತ್ತು ಕುತ್ತಿಗೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಲಿವರ್ ಮತ್ತು ಕಿಡ್ನಿಗೆ ಹಾನಿಯಾಗಿದೆ.
ಈ ಕೃತ್ಯ ಕುರಿತಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಹೆಸರು ಬಹಿರಂಗವಾಗಿದೆ.
ಸಂದೀಪ್, ಧನುಷ್, ಸೃಜಿತ್ ಮತ್ತು ಕಿಶನ್ ಇವರಲ್ಲಿ ಇಬ್ಬರು ಅರೋಪಿಗಳು ಕೇರಳ ಮತ್ತು ಇಬ್ಬರು ಮಂಗಳೂರಿನ ಅಡ್ಯಾರಿನವರು.
ನಾಲ್ವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಯವರಾಗಿದ್ದಾರೆ ಪೋಲಿಸ್ ಮೂಲಗಳು ಹೇಳಿವೆ.
ಸುರತ್ಕಲ್ ಕಾಟಿಪಳ್ಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೆ ಪ್ರತಿಕಾರವಾಗಿ ಈ ಕೃತ್ಯ ನಡೆದಿದೆ.
ಅದೇ ದಿನ ರಾತ್ರಿ ಕೊಟ್ಟಾರ ಚೌಕಿಯಲ್ಲಿ ಚಿಕನ್ ಟಿಕ್ಕಾ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿರುವ ಬಶೀರ್ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದರು ಎಂಬುದಾಗಿ ಪೋಲಿಸ್ ವಿಚಾರಣೆಯ ವೇಳೆ ಬಹಿರಂಗವಾಗಿದೆ.
ಬಷೀರ್ ಬದುಕಿ ಬರಲಿ ಅಂತಾ ದೇವರ ಮೊರೆ ಹೋದ ಬಷೀರ್ ಕುಟುಂಬ:
ಬಶೀರ್ ಬದುಕಿ ಬರಲಿ ಬಶೀರ್ ಕುಟುಂಬ ದೇವರ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಇಡೀ ಕುಟುಂಬ ಉಪವಾಸ ಕೈಗೊಂಡಿದೆ. ಬಷೀರ್ ಪತ್ನಿ ಕುಲ್ಸುಮ್, ಮಕ್ಕಳಾದ ಮಹಮ್ಮದ್ ಇಮ್ರಾನ್, ಮಹಮ್ಮದ್ ಇರ್ಫಾನ್, ಮಹಮ್ಮದ್ ಇಜ್ವಾನ್, ಪುತ್ರಿ ಇಮ್ರಾಝ ಉಪವಾಸ ಕೈಗೊಂಡು ಬಶೀರ್ ಬದುಕಿ ಬರಲಿ ಎಂದು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.