Connect with us

    BANTWAL

    ಬಂಟ್ವಾಳ : ವಿಟ್ಲದಲ್ಲಿ ಗಾಳಿಮಳೆಗೆ ನೆಲಕ್ಕುರುಳಿದ ಶೆಡ್ ಗೆ ಸಾವಿರಾರು ಕೋಳಿಗಳು ಬಲಿ..!

    ಬಂಟ್ವಾಳ : ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ  ಭಾರೀ ಗಾಳಿ ಮಳೆಯಿಂದಾಗಿ ಕೋಳಿ ಸಾಕಣೆ ಶೆಡ್ ಒಂದು  ನೆಲಕ್ಕುರುಳಿದ ಪರಿಣಾಮ  ಸಾವಿರಾರು ಕೋಳಿಗಳು ಸಾವನ್ನಪ್ಪಿವೆ.

     

    ತಾಲೂಕಿನ ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಈ ದುರ್ಘಟನೆ  ನಡೆದಿದೆ. ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಸುಮಾರು 2,200 ಕೋಳಿ ಮರಿಗಳನ್ನು ಅವರು ಸಾಕುತ್ತಿದ್ದರು. ಈ ಪೈಕಿ ಬೆಳೆದಿದ್ದ ಸುಮಾರು 700 ಕೋಳಿಗಳು ಮಾರಾಟವಾಗಿದ್ದವು. ಭಾರಿ ಗಾಳಿ ಮಳೆಯ ಕಾರಣ ಶೆಡ್ಡಿನ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದ ಪರಿಣಾಮ ಸುಮಾರು 1,500 ಕ್ಕೂ ಅಧಿಕ ಕೋಳಿಗಳು ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿವೆ. ಶೆಡ್ ಸಂಪೂರ್ಣ ಧ್ವಂಸಗೊಂಡಿದ್ದು, ಲಕ್ಷಾಂತರ ರೂಪಾಯಿ ಅಪಾರ ನಷ್ಟ ಸಂಭವಿಸಿದೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply