Connect with us

LATEST NEWS

ಮಂಗಳೂರು : ಬೆಂಗ್ರೆ ಜನತೆಗೆ ದುಃಸ್ವಪ್ನವಾಗಿ ಕಾಡುತ್ತಿರುವ ಕೋಸ್ಟಲ್ ಬರ್ತ್ ಕಾಮಗಾರಿ, ಕೃತಕ ನೆರೆಯಿಂದ ಶಾಲೆ ಮನೆಗಳು ಮುಳುಗುವ ಆತಂಕ..!

ಮಂಗಳೂರು : ಮಂಗಳೂರಿನ ಬೆಂಗ್ರೆ ಜನತೆಗೆ ಕೋಸ್ಟಲ್ ಬರ್ತ್ ಕಾಮಗಾರಿ ಜನತೆಗೆ  ದುಃಸ್ವಪ್ನವಾಗಿ ಕಾಡುತ್ತಿದ್ದು, ಕೃತಕ ನೆರೆಯಿಂದ ಶಾಲೆ, ಮನೆಗಳು ಮುಳುಗುವ ಆತಂಕ ಎದುರಾಗಿದೆ.

ತಾಲೂಕಿನ ಕಸಬಾ ಬೆಂಗ್ರೆ ಪ್ರದೇಶದ ನದಿ ತೀರದ ಕೆಲವು ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಇನ್ನೊಂದೆಡೆ ಸಾಗರಮಾಲ ಯೋಜನೆಯ ಕೋಸ್ಟಲ್ ಬರ್ತ್ ಕಾಮಗಾರಿಯ ಕೆಳಭಾಗದಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ಅದೇರೀತಿ ಸಹರಾ ಶಾಲೆಯ ಆವರಣಗೋಡೆಯ ಒಳಭಾಗಗಳಲ್ಲಿ ಮಳೆಹೆಚ್ಚು ಬಂದಾಗೆಲ್ಲಾ ಮಳೆ ನೀರುನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಯೋಜನೆಯ ಕಡೆಯಿಂದ ನೀರು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೇ ಇನ್ನೂ ಪೂರ್ಣ ಪ್ರಮಾಣದಲ್ಲಿ ವ್ಯವಸ್ಥೆ ಮಾಡಿರುವುದಿಲ್ಲ ಹಾಗೆಯೇ ಸದ್ಯಕ್ಕೆ ಎತ್ತರದಲ್ಲಿರುವ ಕಾಮಗಾರಿಯ ಪಕ್ಕ ನೀರು ಹೋಗಲು ಮಾಡಿರುವ ವ್ಯವಸ್ಥೆ ತಗ್ಗು ಪ್ರದೇಶದ ನೀರು ಸರಿಯಾಗಿ ಹೋಗದೆ ಅಲ್ಲಲ್ಲಿ ನೀರು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ರೀತಿಯಲ್ಲಿ ನೀರು ಹೋಗಲು ವ್ಯವಸ್ಥೆ ಮಾಡದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ.

ವಾರಗಳ ಹಿಂದೆ ಈ ಬಗ್ಗೆ ಪೋರ್ಟ್ ಸಹ ಕಾರ್ಯ ನಿರ್ವಾಹಕರಾದ ಪ್ರವೀಣ್ ಅವರ ಗಮನಕ್ಕೆ ನೀಡಿದ್ದು ಸ್ಥಳಕ್ಕೆ ಕರೆಸಿ ಸಮಸ್ಯೆಗಳನ್ನು ತಿಳಿಸಲಾಗಿದೆ. ನೀರು ನಿಲ್ಲುವ ಸಹರಾ ಶಾಲೆಯ ಆವರಣಗೋಡೆಯ ಒಳಭಾಗಕ್ಕೆ ಮರಳು ಹಾಕಿ ಕೊಡುವುದಾಗಿ ತಿಳಿಸಿದ್ದಾರೆ ಮತ್ತೆ ಪೂರ್ಣಪ್ರಮಾಣದಲ್ಲಿ ನೀರು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದ್ದು ಮುಂದೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ.

ನಿನ್ನೆ ದಿನ ತುಂಬೆ ಅಣೆಕಟ್ಟಿನ ನೀರಿನ ಪ್ರಮಾಣ 6ಮೀಟರ್ ಇದ್ದು ನಿನ್ನೆ ಬೆಳಿಗ್ಗೆ ಸುಮಾರು 27 ಗೇಟುಗಳು ತೆರೆದಿದ್ದು ನಂತರ ರಾತ್ರಿ ಸಮಯ ಎಲ್ಲಾ 30ಗೇಟುಗಳು ತೆರೆದಿದೆ. ಅದೇರೀತಿ ಪಾವೂರು ಡ್ಯಾಮಿನ ಎಲ್ಲಾ ಗೇಟುಗಳನ್ನು ತೆರೆದಿದ್ದು ನದಿಭಾಗದ ಪ್ರದೇಶಗಳಲ್ಲಿ ನೀರು ಹೆಚ್ಚಾಗಿದೆ. ಸ್ವಾಭಾವಿಕವಾಗಿ ನೀರು ಹೆಚ್ಚು ಬಿಟ್ಟ ಸಂಧರ್ಭಗಳಲ್ಲಿ ನದಿಭಾಗದ ಪ್ರದೇಶಗಳಲ್ಲಿ ನದಿನೀರಿನ ಪ್ರಮಾಣ ಹೆಚ್ಚಾಗಿ ಮೇಲೆ ಬಂದು ಕೆಲವು ತಗ್ಗು ಪ್ರದೇಶಕ್ಕೆ ಆವರಿಸುತ್ತದೆ.

ನದಿಭಾಗದ ದೋಣಿಗಳು ಒಂದೆಡೆ ವಿಪರೀತ ಮಳೆಯಿಂದಾಗಿ ಹಲವು ದಿನಗಳಿಂದ ಮೇಲ್ಬಾಗದ ಪ್ರದೇಶಗಳಲ್ಲಿ ಹೆಚ್ಚು ಮಳೆಯಿಂದಾಗಿ ಡ್ಯಾಮ್ ನೀರು ಬರುವುದರಿಂದ ನೀರಿನ ರಭಸ ಮತ್ತು ಹೊರ ಹರಿವು ಜೋರಾಗಿರುವುದರಿಂದ ಕೆಲವು ದಿನಗಳಿಂದ ಹೊಸ ಬಲೆಗಳನ್ನು ಎಲ್ಲಾ ಮಾಡಿ ದುಡಿಯಲು ಸಾಧ್ಯವಾಗದೇ ಸರಿಯಾಗಿ ದುಡಿಮೆ ಇಲ್ಲದೆ ನದಿ ದೋಣಿಗಳನ್ನು ಕಟ್ಟಿ ಇಡುವ ಸ್ಥಿತಿ.

*ಈಗಾಗಲೇ ಮಳೆನೀರು ನಿಲ್ಲುವ ಜಾಗಗಳಿಗೆ ಅಣೆಕಟ್ಟಿನ ನೀರು ಬಿಟ್ಟ ನಂತರ ಇಂದು ನದಿ ಭಾಗದ ಬೆಂಗ್ರೆ ಪ್ರದೇಶ ಮುಳುಗುವ ಭೀತಿಯಲ್ಲಿದೆ ಈ ಹಿನ್ನೆಯಲ್ಲಿ ಕೋಸ್ಟಲ್ ಬರ್ತ್ ಕಾಮಗಾರಿಯನ್ನು ತಡೆ ಹಿಡಿದು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಜನರ ನೆರವಿಗೆ ಬರಬೇಕಾಗಿ ಡಿವೈಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ತಯ್ಯೂಬ್ ಬೆಂಗ್ರೆ ಮತ್ತು ಬೆಂಗ್ರೆ ಗ್ರಾಮ ಸಮಿತಿ ಅಧ್ಯಕ್ಷ ಹನೀಪ್ ಬೆಂಗ್ರೆ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *