BANTWAL
ಬಂಟ್ವಾಳ : ಸುಪ್ರಸಿದ್ದ ಕಲ್ಲಡ್ಕ ಕೆ ಟಿ ಹೋಟೆಲ್ ಗೆ ಕಳ್ಳರ ಲಗ್ಗೆ, ಸಿಸಿ ಟಿವಿಯಲ್ಲಿ ಬಂತು ಕಳ್ಳನ ಅಸಲಿ ಚಹರೆ..!!!
ಬಂಟ್ವಾಳ: ನಾಡಿನಾದ್ಯಾಂತ ಮನೆ ಮಾತಾಗಿರುವ ಸುಪ್ರಸಿದ್ದ ಬಂಟ್ವಾಳದ ಕಲ್ಲಡ್ಕ ಕೆ ಟಿ ಹೋಟೇಲಿಗೆ (kalladka KT )ಕಳ್ಳರು ಲಗ್ಗೆ ಇಟ್ಟಿದ್ದಾರೆ. ಹೆಲ್ಮೆಟ್ ಧರಿಸಿ ಬಂದ್ರೂ ಕಳ್ಳನ ಮುಖ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಲ್ಲಡ್ಕದ ಶ್ರೀ ಲಕ್ಮೀನಿವಾಸ ಕೆ.ಟಿ.ಹೋಟೆಲ್ ಗೆ ಶುಕ್ರವಾರ ಮುಂಜಾನೆ ಸುಮಾರು 2 ಗಂಟೆ ವೇಳೆ ಹೆಲ್ಮೆಟ್ ಧರಿಸಿ ಬಂಧ ಕಳ್ಳ ಟಾರ್ಚ್ ಬಳಸಿ, ಕ್ಯಾಶ್ ಕೌಂಟರ್ ಸಹಿತ ಇತರ ಕಡೆಗಳಲ್ಲಿ ಜಾಲಾಡಿ ಬಳಿಕ ದೇವರ ಹುಂಡಿಯನ್ನು ಎತ್ತಾಕಿ ಹೋಗಿದ್ದಾನೆ.
ಕಳವಿನ ಬಗ್ಗೆ ಹೋಟೇಲು ಮಾಲಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕೃತ ದೂರು ನೀಡಿಲ್ಲ ಎನ್ನಲಾಗಿದೆ. ದೇವರ ಡಬ್ಬಿಯಲ್ಲಿದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ ಕಳ್ಳ ಇತರ ಕಡೆಗಳಲ್ಲಿ ಜಾಲಾಡಿರುವ ದೃಶ್ಯ ಸಿಸಿ.ಟಿ.ವಿಯಲ್ಲಿ ಸೆರೆಯಾಗಿದೆ. ಸುಮಾರು 7 ನಿಮಿಷಗಳ ಕಾಲ ಹೋಟೆಲ್ ಒಳಗಡೆ ಆರಾಮವಾಗಿ ಕಳ್ಳ ಜಾಲಾಡಿರುವ ದೃಶ್ಯ ಸೆರೆಯಾಗಿದೆ. ಸಿಸಿ ಕ್ಯಾಮರಾ ಪೂಟೇಜ್ ಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
You must be logged in to post a comment Login