Connect with us

    LATEST NEWS

    ಬಂಟ್ವಾಳ: ” ‘ಬಿಸಿರೋಡ್‌’ ನಿಂದ ಮಂಗಳೂರಿಗೆ ಸಿಟಿ ಬಸ್ ಪ್ರಾರಂಭಿಸಿ ಪುಣ್ಯಕಟ್ಟಿಕೊಳ್ಳಿ”, ವಿದ್ಯಾರ್ಥಿಗಳಿಂದ ವಿಭಿನ್ನ ಅಭಿಯಾನ..!

    ಬಂಟ್ವಾಳ : ‘ಬಿಸಿರೋಡ್‌’ ನಿಂದ ಮಂಗಳೂರಿಗೆ ಸಿಟಿ ಬಸ್ ಪ್ರಾರಂಭಿಸಿ ಪುಣ್ಯಕಟ್ಟಿಕೊಳ್ಳಿ”. ಇದೇನು ವಿಚಾರ ಅಂದುಕೊಂಡಿದ್ದೀರಾ?. ಹೌದು ಬಿಸಿರೋಡಿನಲ್ಲಿ ಬಸ್ ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ಸಮೂಹ, ಕೊನೆಗೆ ಬಸ್ ವ್ಯವಸ್ಥೆ ಇಲ್ಲದೆ ಸೊರಗಿಹೋದ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲು ಈ ವಿಭಿನ್ನ ಅಭಿಯಾನ ವನ್ನು ಆರಂಭಿಸಿದ್ದಾರೆ.


    ಬೆಳಿಗ್ಗೆ ಸುಮಾರು 7 ಗಂಟೆಯಿಂದ 9 ಗಂಟೆವರೆಗೂ ಬಿಸಿರೋಡಿನ ಸರ್ವೀಸ್ ರಸ್ತೆಯಲ್ಲಿ ಕಿಕ್ಕಿರಿದು ಬಸ್ ಗಾಗಿ ಕಾಯುತ್ತಾ ನಿಂತಿರುವ ವಿದ್ಯಾರ್ಥಿಗಳು….
    ಕೊನೆಗೆ ಸಿಕ್ಕ ಸಿಕ್ಕ ಬಸ್ ಗಳ ಪುಟ್ ಪಾತ್ ನಲ್ಲಿ ‌ನೇತಾಡಿಕೊಂಡು ಜೀವದ ಭಯದಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಲು ಇಲಾಖೆಗೆ ಆಗಲಿ ಜನಪ್ರತಿನಿಧಿಗಳಾಗಲಿ ಸಾಧ್ಯವಾಗಿಲ್ಲ ಅನ್ನುವ ಕಾರಣಕ್ಕಾಗಿ ವಿದ್ಯಾರ್ಥಿಗಳು ಅಭಿಯಾನ ಪ್ರಾರಂಭ ಮಾಡಿದ್ದಾರೆ. ಇದನ್ನು ಕಂಡಾದರೂ ಜನಪ್ರತಿನಿಧಿಗಳು ಮತ್ತು ಇಲಾಖೆ ಎಚ್ಚೆತ್ತ ಕೊಂಡು ವ್ಯವಸ್ಥೆ ಕಲ್ಪಿಸಿಯಾರು ಎಂಬ ಭರವಸೆ ಇವರದು.

     


    ಬಸ್ ಒದಗಿಸಿ: ಅಭಿಯಾನ
    ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಬಸ್ ಗಾಗಿ ಬಿಸಿರೋಡಿನಲ್ಲಿ ಕಾಯುವುದು ಮತ್ತು ಬಸ್ ನ ಪುಟ್ ಪಾತ್ ನಲ್ಲಿ ನೇತಾಡಿಕೊಂಡು ಹೋಗುವ ದೃಶ್ಯ ಅನೇಕ ವರ್ಷಗಳಿಂದ ನೋಡುತ್ತಾ ಇದ್ದೇವೆ. ಕನಿಷ್ಟ ಪಕ್ಷ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಕೆ.ಎಸ್.ಆರ್.ಟಿ.ಬಸ್ ನಿಗಮ ದವರು ಹೆಚ್ಚು ವರಿ ಬಸ್ ಹಾಕಿದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ. ಬೆಳಿಗ್ಗೆ ಕಾಲೇಜಿಗೆ ತೆರಳುವ ವೇಳೆ ಪುತ್ತೂರು ಕಡೆಯಿಂದ ವಿಟ್ಲ ಮತ್ತು ಬೆಳ್ತಂಗಡಿ ಕಡೆಯಿಂದ ಬರುವ ಬಹುತೇಕ ಎಲ್ಲಾ ಬಸ್ ಗಳಲ್ಲಿ ಪ್ಯಾಕಪ್ ಆಗಿರುತ್ತದೆ. ಬಿಸಿರೋಡಿಗೆ ಬರುವಾಗ ಬಸ್ ಹತ್ತಲು ಸಾಧ್ಯವಿಲ್ಲ ದಂತೆ ಜನ ಕಿಕ್ಕಿರಿದು ತುಂಬಿಕೊಂಡಿರುವ ಕಾರಣ ವಿದ್ಯಾರ್ಥಿಗಳಿಗೆ ಮೆಟ್ಟಿಲು ಹತ್ತಲು ಜಾಗವಿಲ್ಲದೆ ನೇತಾಡಿಕೊಂಡು ಹೋಗಬೇಕಾಗಿದೆ.

    ಬಸ್ ವ್ಯವಸ್ಥೆ ಸರಿಯಲ್ಲ ದ ಕಾರಣ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳಲು ಅಸಾಧ್ಯವಾಗುತ್ತಿದೆ. ಬೆಳಿಗ್ಗೆ ಹೊತ್ತಿನ‌ ಪಾಠಗಳನ್ನು ಮಿಸ್ ಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕಳೆದ ವಾರ ಬಸ್ ನಲ್ಲಿ ನೇತಾಡುತ್ತಿದ್ದಂತೆ ಬಸ್ ನ ಬಾಗಿಲು ತುಂಡಾಗಿ ವಿದ್ಯಾರ್ಥಿಗಳ ಕೈಯಲ್ಲಿ ಬಂದಿತ್ತು. ಈ ರೀತಿಯಲ್ಲಿ ಜೀವದ ಹಂಗು ತೊರೆದು ಪ್ರಯಾಣಿಸುವ ವಿದ್ಯಾರ್ಥಿಗಳ ಜೀವಕ್ಕೆ ಏನಾದರೂ ಆದರೆ ಬೆಲೆ ಕೊಡುವವರು ಯಾರು? ಅಭಿವೃದ್ಧಿ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳೆ ಇತ್ತ ಚಿತ್ತ ಹರಿಸಿ ಎಂದು ಅವರು ಮನವಿ ಮಾಡಿದ್ದಾರೆ ‌. ಹಾಗಾಗಿ ಸಿ.ಟಿ.ಬಸ್ ನ ವ್ಯವಸ್ಥೆ ಯಾದರೂ ಕಲ್ಪಿಸಿ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply