Connect with us

BANTWAL

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನ ಜೀರ್ಣೋದ್ಧಾರ – ದಾರಂದ ಮುಹೂರ್ತ, ಭೂಮಿ ಪೂಜೆ

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಸುತ್ತುಪೌಳಿಯ ಪ್ರಧಾನ ಬಾಗಿಲಿನ ದಾರಂದ ಮುಹೂರ್ತ, ಶ್ರೀ ನಾಗಬನ, ಶ್ರೀ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಸ್ಥಾನಗಳಿಗೆ ಭೂಮಿ ಪೂಜೆಯು ತಂತ್ರಿಗಳಾದ ವೇ|ಮೂ| ದಿನೇಶಕೃಷ್ಣ ತಂತ್ರಿ ವರ್ಕಾಡಿ ಅವರ ನೇತೃತ್ವದಲ್ಲಿ ನಡೆಯಿತು.

ಮುಂಬಯಿನ ಹೋಟೆಲ್ ಉದ್ಯಮಿ ಬಾಬು ಶೆಟ್ಟಿ ಪೆರಾರ, ಮಣಿನಾಲ್ಕೂರು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾಧಾಕೃಷ್ಣ ಮಯ್ಯ ಕೈಯೊಟ್ಟು, ಉದ್ಯಮಿ ದೇವದಾಸ್ ಶೆಟ್ಟಿ ಬದ್ಯಾರ್ ಹಾಗೂ ಧರ್ಮಸ್ಥಳ ಕ್ಷೇತ್ರದ ಜಮಾ ಉಗ್ರಾಣದ ನಿವೃತ್ತ ಮುತ್ಸದ್ಧಿ ಬಿ.ಭುಜಬಲಿ ಧರ್ಮಸ್ಥಳ ಅವರು ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಭೂಮಿ ಪೂಜೆ ನೆರವೇರಿಸಿದರು.

ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಪುರೋಹಿತ ವಿಜಯಕೃಷ್ಣ ಐತಾಳ್ ಪೂಂಜೂರು ಹಾಗೂ ಅರ್ಚಕ ಜಯರಾಮ ಕಾರಂತ ಅವರು ಪೂಜಾ ವಿಽ ವಿಧಾನ ನೆರವೇರಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ ಅವರು ಶಿಲ್ಪಿ ಅಶೋಕ್ ಕಾರ್ಕಳ, ದಾರುಶಿಲ್ಪಿ ಹರೀಶ್ ಆಚಾರ್ಯ, ಹರೀಶ್ ಮೇಸ್ತಿç ಹಂಚಿಕಟ್ಟೆ ಅವರಿಗೆ ವೀಳ್ಯವನ್ನು ನೀಡಿದರು. ಸುತ್ತು ಪೌಳಿಯ ದ್ವಾರದ ದಾನಿ ಶಿವಪ್ರಸಾದ್ ಶಾಂತಿ ಬಲಯೂರು ದಂಪತಿಯನ್ನು ಗೌರವಿಸಲಾಯಿತು.

ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಆರ್ಥಿಕ ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಪ್ರಮುಖರಾದ ಸೂರ್ಯನಾರಾಯಣ ಐತಾಳ್ ಲಡ್ಡುಕೋಡಿ, ರಾಮಣ್ಣ ಶೆಟ್ಟಿ ಕಲ್ಕೊಟ್ಟೆ, ಕುಸುಮಾಕರ ಶೆಟ್ಟಿ ಕುರ್ಯಾಳ, ಸಂಜೀವ ಪೂಜಾರಿ ಕಟ್ಟದಡೆ, ಉಮೇಶ್ ಆಳ್ವ ಕೊಟ್ಟುಂಜ, ವಿಠಲ್ ಎಂ.ಆರುಮುಡಿ, ರಾಧಾಕೃಷ್ಣ ರೈ ಕೊಟ್ಟುಂಜ, ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ಧನಂಜಯ ಶೆಟ್ಟಿ ನಾಡಬೆಟ್ಟು, ಶಶಿಕಾಂತ ಶೆಟ್ಟಿ ಆರುಮುಡಿ, ದಯಾನಂದ ಪೂಜಾರಿ ಕೋಡಿ, ಸುಂದರ ಶೆಟ್ಟಿ ಹೊಳ್ಳರಗುತ್ತು, ಜಯಚಂದ್ರ ಆಚಾರ್ಯ, ರಾಧಾಕೃಷ್ಣ ಶೆಟ್ಟಿ ಕಲ್ಕೊಟ್ಟೆ, ಶೀನ ನಾಯ್ಕ್ ಕಡೇಶ್ವಾಲ್ಯ, ಗಿರೀಶ್ ನಾಯ್ಕ್ ನೀರಪಲ್ಕೆ, ಚಂದ್ರಶೇಖರ ನಾಯ್ಕ್, ಗಂಗಯ್ಯ ನಾಯ್ಕ್, ಜಯಂತ್ ನಾಯ್ಕ್ ಮಠದಬೆಟ್ಟು, ಹರೀಶ್ ಶೆಟ್ಟಿ ಪಡ್ಡಾಯಿಬೆಟ್ಟು, ಡೀಕಯ್ಯ ಪೂಜಾರಿ ಬೊಳ್ಳೂರು, ಕೃಷ್ಣಪ್ಪ ಮೂಲ್ಯ, ನೋಣಯ್ಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Share Information
Advertisement
Click to comment

You must be logged in to post a comment Login

Leave a Reply