Connect with us

    BANTWAL

    ಬಂಟ್ವಾಳ : ಬಂಟ್ವಾಳ ಗ್ರಾಮಾಂತರ ಪೋಲೀಸರಿಂದ ಜನ ಮೆಚ್ಚುವ ಕಾರ್ಯ..!

    ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಪೊಲೀಸರ ಮಾನವೀಯ ಗುಣಗಳ ದರ್ಶವಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ಔಷಧೀಯ ಖರ್ಚಿಗಾಗಿ ಧನ ಸಹಾಯ ಮಾಡಿದ್ದಾರೆ.

    ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಪೊಲೀಸರ ಮಾನವೀಯ ಗುಣಗಳ ದರ್ಶವಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ಔಷಧೀಯ ಖರ್ಚಿಗಾಗಿ ಧನ ಸಹಾಯ ಮಾಡಿದ್ದಾರೆ.

    ಠಾಣೆಯ ಕೆಲಸಕ್ಕಾಗಿ ಬರುತ್ತಿದ್ದ ವನಿತಾ ಎಂಬ ಮಹಿಳೆಗೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ನೇತ್ರತ್ವದಲ್ಲಿ ಸುಮಾರು ರೂ. 27,000 ಸಾವಿರ ನಗದು ಹಣವನ್ನು ನೀಡಿದ್ದಾರೆ.
    ‌‌
    ಬಂಟ್ವಾಳ ಪೇಟೆ ನಿವಾಸಿಯಾಗಿರುವ ವನಿತ ಅವರು ತೀರಾ ಬಡತನದ ಕುಟುಂಬದಲ್ಲಿ ಜೀವನ ಮಾಡುವವರು.

    ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಶುಚಿತ್ವದ ಕೆಲಸಕ್ಕಾಗಿ ಬರುತ್ತಿದ್ದರು.

    ಆದರೆ ಇತ್ತೀಚೆಗೆ ಮನೆಯ ಸಮೀಪ ಬಿದ್ದ ಕೈಯ ಮೂಳೆ ಮುರಿತಕ್ಕೆ ಒಳಗಾಗಿ ಕೆಲಸಕ್ಕೆ ಬರಲು ಅಸಾಧ್ಯವಾಗಿತ್ತು.

    ತೀರಾ ಬಡತನದಲ್ಲಿರುವ ವನಿತಾ ಅವರಿಗೆ ಕೆಲಸ ಮಾಡಿದರೆ ಮೂರು ಹೊತ್ತು ಊಟ ಎಂಬ ಪರಿಸ್ಥಿತಿ .ಹಾಗಾಗಿ ಕಳೆದ ಕೆಲವು ತಿಂಗಳ ಕಾಲ ದುಡಿಮೆ ಇಲ್ಲದೆ ಕಷ್ಟದ ಸ್ಥಿತಿಯಲ್ಲಿರುವ ವಿಚಾರ ಪೋಲೀಸರ ಗಮನಕ್ಕೆ ಬಂದಿತು.

    ಇವರ ಕಷ್ಟವನ್ನು ತಿಳಿದ ಬಂಟ್ವಾಳ ಪೋಲೀಸರು ವನಿತಾ ಅವರ ಮನೆಯ ಖರ್ಚಿಗಾಗಿ ಠಾಣೆಯಲ್ಲಿ ಸಿಬ್ಬಂದಿಗಳಿಂದ ಒಟ್ಟುಗೂಡಿಸಿದ ನಗದು ಹಣವನ್ನು ಅವರಿಗೆ ಹಸ್ತಾಂತರ ಮಾಡಿ ಮಾನವೀಯತೆ ಮೆರೆದಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply