BANTWAL
ಬಂಟ್ವಾಳದಲ್ಲಿ ಜನ ಸಂಪರ್ಕ ಸಭೆ ನಡೆಸಿದ ಮೆಸ್ಕಾಂ-ದೂರುಗಳಿಗೆ ಸ್ಪಂದಿಸಿದ ಅಧಿಕಾರಿಗಳು..!
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ಬಂಟ್ವಾಳ ನಂ.1 ನಂ.2 ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಬಂಟ್ವಾಳ ಉಪವಿಭಾಗ ಕಚೇರಿಯಲ್ಲಿ ಸೆ.20 ರಂದು ನಡೆಯಿತು. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಬಂಟ್ವಾಳ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ಬಂಟ್ವಾಳ ನಂ.1 ನಂ.2 ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಬಂಟ್ವಾಳ ಉಪವಿಭಾಗ ಕಚೇರಿಯಲ್ಲಿ ಸೆ.20 ರಂದು ನಡೆಯಿತು. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಜನಸಂಪರ್ಕ ಸಭೆಯಲ್ಲಿ ಸುಮಾರು 10 ದೂರುಗಳು ಸಾರ್ವಜನಿಕರಿಂದ ಬಂದಿದ್ದು, ಪ್ರತಿಯೊಂದು ಸಮಸ್ಯೆಗಳಿಗೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಕಾವಳಪಡೂರುಮನೆ ಮೇಲೆ ಹಳೆ ತಂತಿ ಹಾದು ಹೋಗಿದ್ದು, ಕಡಿದು ಬೀಳುವ ಹಂತದಲ್ಲಿದೆ, ಕಡಿದು ಬಿದ್ದು ಮನೆಗೆ ಹಾನಿಯಾಗುವ ಸಂಭವವಿದ್ದು ಹಳೆಯ ತಂತಿಯನ್ನು ಬದಲಿಸಲು ಮನವಿ ಮಾಡಿದರು.
ವಗ್ಗ ಸಮೀಪದ ಪಚ್ಚಾಜೆ ಎಂಬಲ್ಲಿ ಇರುವ ಟಿ.ಸಿ.ಯ ಹಳೆ ತಂತಿಯನ್ನು ಬದಲಿಸುವಂತೆ ಅರ್ಜಿಯನ್ನು ನೀಡಿದರು. ಕೆಳಗಿನ ವಗ್ಗ ಎಂಬಲ್ಲಿ ವಿದ್ಯುತ್ ವಯರಗಳು ಜೋತು ಬಿದ್ದ ಸ್ಥಿತಿಯಲ್ಲಿದ್ದು, ತಂತಿಯನ್ನು ಸರಿಪಡಿಸಲು ಸಂತೋಷ್ ಅಮೀನ್ ಎಂಬವರು ತಿಳಿಸಿದರು.
ನಾವೂರ ಸುಲ್ತಾನ ನಗರ ಎಂಬಲ್ಲಿ ಹಳೆಯದಾದ ಸರ್ವಿಸ್ ವಯರ್ ಗಳು ಇದ್ದು, ಇದು ಪ್ರಾಣಕ್ಕೆ ಕುತ್ತು ತರುವಂತದ್ದು,ಹಾಗಾಗಿ ಶೀಘ್ರವಾಗಿ ಬದಲಾವಣೆ ಮಾಡುವಂತೆ ಕೇಳಿಕೊಂಡರು.
ಮಾಹಿತಿ ಕೊರತೆಯಿಂದ ಗೃಹ ಲಕ್ಮೀ ಯೋಜನೆಯಲ್ಲಿ ವಿದ್ಯುತ್ ಉಚಿತವಾಗಿ ಸಿಕ್ಕಿಲ್ಲ ಎಂಬ ದೂರು ಬಂದ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಸವಿವರವಾದ ಮಾಹಿತಿ ನೀಡಿದರು.
ಬಾಳ್ತಿಲ ಗ್ರಾಮದ ಕಾಲೋನಿಯಲ್ಲಿ ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆ ಯಿಂದ ಬಹಳಷ್ಟು ತೊಂದರೆಗೆ ಒಳಗಾಗಿದ್ದಾರೆ.
ಇದರ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಲ್ಲಿ ಕೇಳಿಕೊಂಡರು.
ಗೋಳ್ತಜಲು ಗ್ರಾ.ಪಂ.ವ್ಯಾಪ್ತಿಯ ಪೂವಳ,ರಾಯಪ್ಪಕೋಡಿ,ಬಿ ಎಸ್ ಕೋಡಿ ಎಂಬ ಮೂರು ಕಡೆಗಳಲ್ಲಿ ವಿದ್ಯುತ್ ಪರಿವರ್ತಕ ಗಳ ತಂತಿ ಬದಲಾವಣೆ ಮಾಡುವಂತೆ ಗೋಳ್ತಮಜಲು ಗ್ರಾ.ಪಂ.ಸದಸ್ಯ ಗೋಪಾಲಕೃಷ್ಣ ಅವರು ಅಧಿಕಾರಿಗಳಿಗೆ ತಿಳಿಸಿದರು.
ಸಾರ್ವಜನಿಕರ ಎಲ್ಲಾ ಸಮಸ್ಯೆ ಗಳನ್ನು ಆಲಿಸಿದ ಅಧಿಕಾರಿಗಳು ಸಮಸ್ಯೆ ಗಳ ಪರಿಹಾರಕ್ಕೆ ಅಂದಾಜು ಪಟ್ಟಿ ತಯಾರಿಸಿ ಇಲಾಖೆಯ ಸೂಚನೆಯಂತೆ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್,ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾರಾಯಣ ಭಟ್ ಉಪಸ್ಥಿತರಿದ್ದರು.