Connect with us

    BANTWAL

    ಕೋರ್ಟ್ ಕಣ್ತಪ್ಪಿಸಿ ಭೂಗತರಾಗಿದ್ದ 18 ಮಂದಿಯನ್ನು ಉತ್ತರ ಪ್ರದೇಶದಿಂದ ಎತ್ತಾಕಿಕೊಂಡು ಬಂದ ಬಂಟ್ವಾಳ ಪೊಲೀಸರು!!

    ಬಂಟ್ವಾಳ: ಪ್ರಕರಣ ಒಂದರಲ್ಲಿ ಜಾಮೀನು ಪಡೆದು ಕೋರ್ಟ್ ಕಣ್ತಪ್ಪಿಸಿ ಭೂಗತರಾಗಿದ್ದ 18 ಮಂದಿಯನ್ನು ಉತ್ತರ ಪ್ರದೇಶದಿಂದ ಬಂಟ್ವಾಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಕಾರಣಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ, ಜಾಮೀನು ಪಡೆದು ಬಿಡುಗಡೆಗೊಂಡ ಉತ್ತರ ಪ್ರದೇಶ ಮೂಲದ ಸುಮಾರು 18 ಮಂದಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 247/2017 ಕಲಂ 379 & 34 i p c ಮಾನ್ಯ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದ ಸಿ.ಸಿ ನಂಬ್ರ 1266/2018 ರ ಆರೋಪಿತರು ಸುಮಾರು 5 ವರ್ಷಗಳಿಂದ ತಲೆಮರೆಸಿಕೊಂಡಿದ್ದರು.
    ಬಲಿಯಾ ಜಿಲ್ಲೆ, ಮತ್ತು ಘಾಜೀಯಾಪುರ ಉತ್ತರಪ್ರದೇಶ ರಾಜ್ಯದ ಪೀಯುಶ್ ಕುಮಾರ್, ವಿನಯ್ ಕುಮಾರ್ , ಬ್ರಿಜಿ ನಾರಾಯಣ, ರವೀಂದ್ರ, ಕೃಪ ಶಂಕರ್, ವಿವೇಕ್ ರಾಮ್, ಬದ್ಧ ರಾಮ್, ನಂದಿನಿ ರಾಮ್, ಕಿಶೋರ್ ಕುಮಾರ್, ಶಾಮ್ ಬಿಹಾರಿ ರಾಮ್, ಪ್ರೇಮಾಚಂದ ರಾಮ್, ಸತೇಂದ್ರ, ಭಗವಾನ್ ರಾಮ್, ಉಮೇಶ್ ರಾಮ್, ರಾಸ್ ಬಿಹಾರಿ ರಾಮ್, ಭಗೀರಥಿ ಚೌಧರಿ, ಸುನೀಲ್ ರಾಮ್, ನಂದಿಹಳ ರಾಮ್ ಎಂಬುವರನ್ನು ಪೋಲೀಸರು ಬಂಧಿಸಿದ್ದಾರೆ. ಪೊಲೀಸ್‌ ನಿರೀಕ್ಷಕರಾದ ಶಿವಕುಮಾರ ಬಿ. ಹಾಗೂ ಪೊಲೀಸ್‌ ಉಪನಿರೀಕ್ಷಕರಾದ ಹರೀಶ್‌ ಎಂ.ಆರ್‌ ರವರ ಮಾರ್ಗದರ್ಶನದಲ್ಲಿ ಉಪನಿರೀಕ್ಷಕ ರಾದ ಮೂರ್ತಿ ಹೆಚ್ ಸಿ ಗಣೇಶ್ ಪ್ರಸಾದ್ ಪಿ.ಸಿ ಯೋಗೇಶ್‌ . ಡಿ.ಎಲ್‌ ವಿಜಯ್‌ ಕುಮಾರ್‌ ಸುರೇಶ್ ಉಪ್ಪಾರ ರವರು ಉತ್ತರ ಪ್ರದೇಶಕ್ಕೆ ತೇರಳಿ ಮಾಹಿತಿ ಸಂಗ್ರಹಿಸಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *