Connect with us

    BANTWAL

    ಬಂಟ್ವಾಳ ಆಡಳಿತಸೌಧದಲ್ಲಿ ಆಗಾಗ ಕೈಕೊಡುವ ಲಿಫ್ಟ್‌ -ಪ್ರಾಣ ಸಂಕಟದಲ್ಲಿ ಹಿರಿ ಜೀವಗಳು..!

    ಆಡಳಿತ ಸೌಧದ ಕಚೇರಿಯಲ್ಲಿ ಅಳವಡಿಸಲಾದ ಲಿಪ್ಟ್ ಕೈ ಕೊಟ್ಟು ಪರಿಣಾಮವಾಗಿ  ಅಜ್ಜಿಯೋರ್ವರು ಮೇಲಿನ ಅಂತಸ್ತಿಗೆ ಕಷ್ಟಪಟ್ಟು ಹೋಗಬೇಕಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದಲ್ಲಿ ನಡೆದಿದೆ.

    ಬಂಟ್ವಾಳ: ಆಡಳಿತ ಸೌಧದ ಕಚೇರಿಯಲ್ಲಿ ಅಳವಡಿಸಲಾದ ಲಿಪ್ಟ್ ಕೈ ಕೊಟ್ಟು ಪರಿಣಾಮವಾಗಿ  ಅಜ್ಜಿಯೋರ್ವರು ಮೇಲಿನ ಅಂತಸ್ತಿಗೆ ಕಷ್ಟಪಟ್ಟು ಹೋಗಬೇಕಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದಲ್ಲಿ ನಡೆದಿದೆ.

    ಆಡಳಿತ ಸೌಧದ ಕಚೇರಿಯಲ್ಲಿ ಮೇಲಿನ ಅಂತಸ್ತಿಗೆ ತೆರಳಲು ಸಹಾಯವಾಗುವ ನಿಟ್ಟಿನಲ್ಲಿ ಅದರಲ್ಲೂ ಕಚೇರಿ ಕೆಲಸ ನಿಮಿತ್ತ ಬರುವ ಹಿರಿಯ ನಾಗರಿಕರಿಗೆ, ಅಶಕ್ತರಿಗೆ ಅನುಕೂಲವಾಗಿರಲೆಂದು ಈ ಲಿಫ್ಟ್ ಆಳವಡಿಸಲಾಗಿತ್ತು.

    ಆದ್ರೆ ಲಿಫ್ಟ್ ಅಳವಡಿಸಿದ ದಿನದಿಂದ ಪದೇ ಪದೇ ಕೆಟ್ಟು ಹೋಗುವುದರಿಂದ ಇಲ್ಲಿಗೆ ಬರುವ ಜನರಿಗೆ ಅದರಲ್ಲೂ ಅಶಕ್ತರಿಗೆ ಮತ್ತು ಹಿರಿಯ ನಾಗರಿಕರಿಗೆ ಬಹಳಷ್ಟು ತೊಂದರೆಗಳಾಗುತ್ತಿದೆ.

    ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆ ಇರುವವರು, ಉಸಿರಾಟದ ಸಮಸ್ಯೆ ಇರುವವರಿಗೆ ಮಹಡಿಯ ಮೆಟ್ಟಿಲುಗಳನ್ನು ಏರಬೇಕಾದರೆ ಜೀವ ಕೈಯಲ್ಲಿಟ್ಟು , ದೇವರ ಮೇಲೆ ಭಾರ ಹಾಕಿ ಮೆಟ್ಟಿಲುಗಳನ್ನು ಏರಬೇಕಾಗುತ್ತದೆ.

    ಮೇಲೆ ಹತ್ತುವಾಗ ಸ್ವಲ್ಪ ಎಡವಟ್ಟುಗಳು ನಡೆದರೆ ಜೀವವೇ ಕಳಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವುದುದಂತು ಗ್ಯಾರಂಟಿ.

    ಕೆಲವೊಮ್ಮೆ ಲಿಪ್ಟ್ ಕೆಟ್ಟು ನಿಂತ ವೇಳೆ ಲಿಪ್ಟ್ ನೊಳಗೆ ಸಿಲುಕಿಕೊಂಡ ಅನೇಕ ಘಟನೆಗಳು ಇಲ್ಲಿ ಸರ್ವೆ ಸಾಮಾನ್ಯವಾಗಿದ್ದು ಸಂಬಂಧಪಟ್ಟವರು ಈ ಕೂಡಲೇ ಇದನ್ನು ಸರಿಪಡಿಸಿ ಸಾರ್ವಜನಿಕರ ಸೇವೆಗೆ ಯೋಗ್ಯವಾಗುವ ನಿಟ್ಟಿನಲ್ಲಿ ಸನ್ನದ್ದವಾಗಿಡಬೇಕೆಂದು ಮತ್ತು ಇದನ್ನು ನಿರ್ವಹಿಸಲು ನುರಿತ ಸಿಬಂದಿಯನ್ನು ಮೀಸಲಿಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply