BANTWAL
ಬಂಟ್ವಾಳ: ಮಳೆಗೆ ಸೋರುತ್ತಿದೆ ರೈಲ್ವೆ ನಿಲ್ದಾಣದ ಹೈಟೆಕ್ ಶೆಲ್ಟರ್
ಬಂಟ್ವಾಳ, ಆಗಸ್ಟ್ 07: ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕುಂಜೆ ಎಂಬಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ಆದರ್ಶ ಯೋಜನೆಯಡಿ ₹ 5.5ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ನೀಡಿದ ರೈಲ್ವೆ ನಿಲ್ದಾಣ ಮಳೆಗೆ ಸೋರುತ್ತಿದೆ.
ವಿದ್ಯುತ್ ಕೈಕೊಟ್ಟರೆ ಪ್ರಯಾಣಿಕರು ಕತ್ತಲೆಯಲ್ಲೇ ಕಳೆಯುವಂತಾಗಿದೆ ಎಂಬ ಆರೋಪ ಇಲ್ಲಿನ ಪ್ರಯಾಣಿಕರಿಂದ ಕೇಳಿ ಬಂದಿದೆ. ಇಲ್ಲಿನ ಬಹುವರ್ಷಗಳ ಬೇಡಿಕೆಯಾಗಿದ್ದ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಪ್ರಯಾಣಿಕರು ರೈಲ್ವೆ ಹಳಿಗೆ ಇಳಿದೇ ದಾಟವುವಂತಾಗಿದೆ.
ಸುಸಜ್ಜಿತ ಶೌಚಾಲಯ ಸಹಿತ 600 ಮೀ. ಫ್ಲ್ಯಾಟ್ ಫಾರಂ ವಿಸ್ತರಣೆಗೊಂಡಿದ್ದು, ಶೆಲ್ಟರ್ ಕೆಳಗೆ ಮಳೆ ನೀರು ಸೋರಿಕೆಯಿಂದಾಗಿ ಪ್ರಯಾಣಿಕರಿಗೆ ಕೂರಲು ಜಾಗವಿಲ್ಲ. ಪ್ರತಿದಿನ ಪಡ್ಡೆ ಹುಡುಗರು ಮತ್ತು ಕಿಡಿಗೇಡಿಗಳು ರೈಲ್ವೆ ನಿಲ್ದಾಣದಲ್ಲಿ ಸುತ್ತಾಡುತ್ತಿರುವ ಬಗ್ಗೆಯೂ ದೂರು ಕೇಳಿ ಬಂದಿದೆ.