Connect with us

    BANTWAL

    ಬಂಟ್ವಾಳ : ಪಾಣೆಮಂಗಳೂರು ಸೇತುವೆ ಮೇಲೆ ಕೆಟ್ಟುನಿಂತ ಕಾಂಟ್ರಾಕ್ಟ್ ಕ್ಯಾರೇಜ್ ಬಸ್,1.5 ಗಂಟೆ ಟ್ರಾಫಿಕ್ ಬ್ಲಾಕ್..!

    ಬಂಟ್ವಾಳ: ಪಾಣೆಮಂಗಳೂರು ಸೇತುವೆ ಮೇಲೆ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಒಂದು ಕೆಟ್ಟು ನಿಂತ ಪರಿಣಾಮ ಸುಮಾರು ಒಂದುವರೆ ತಾಸುಗಳ ಕಾಲ ಟ್ರಾಪಿಕ್ ಸಮಸ್ಯೆ ಉಂಟಾಗಿದ್ದು,ಪ್ರಯಾಣಿಕರು ಸಿಲುಕಿಕೊಂಡ ಘಟನೆ ನಡೆಯಿತು.


    ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುವ ಅರಫಾ ಬಸ್ ನ ವೀಲ್ ಜಾಮ್ ಉಂಟಾದ ಕಾರಣ ಪಾಣೆಮಂಗಳೂರು ಹೊಸ ಸೇತುವೆ ಮಧ್ಯ ಭಾಗದಲ್ಲಿ ನಿಂತಿತ್ತು.
    ಸೇತುವೆ ಮಧ್ಯ ಭಾಗದಲ್ಲಿ ಬಸ್ ಕೆಟ್ಟು ನಿಂತ ಪರಿಣಾಮ ಎರಡು ಕಡೆಯಿಂದ ಬರುವ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.
    ಅನೇಕ ದಿನಗಳಿಂದ ಪಾಣೆಮಂಗಳೂರು ಸೇತುವೆ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.
    ಇಂದು ಕೂಡ ಸಂಜೆ ಸುಮಾರು 5.30 ರ ವೇಳೆ ಕೆಟ್ಟು ನಿಂತಿದ್ದ ಬಸ್ ಸುಮಾರು 7 ಗಂಟೆವೆರೆಗೆ ಅಲ್ಲೇ ಉಳಿದಿತ್ತು. ಬಳಿಕ ಪೋಲೀಸರು
    ಕ್ರೇನ್ ತರಿಸಿ ಬಸ್ ನ್ನು ಒಂದು ಬದಿಗೆ ಎಳೆದ ತಂದು ಸುಗಮ ಸಂಚಾರಕ್ಕೆ ಅವಕಾಶ ಮಾಡಿದರು.
    ಪಾಣೆಮಂಗಳೂರು ಹಳೆಯ ಉಕ್ಕಿನ ಸೇತುವೆಯಲ್ಲಿ ಬಿರುಕು ಕಂಡ ಹಿನ್ನೆಲೆಯಲ್ಲಿ ಸಾಮರ್ಥ್ಯದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಇದೆ. ಕಳೆದ ಬಾರಿ ಹೊಸ ಸೇತುವೆಯಲ್ಲಿ ಬ್ಲಾಕ್ ಆದ ಸಂದರ್ಭದಲ್ಲಿ ಹಳೆಯ ಸೇತುವೆಯಲ್ಲಿ ಪ್ರಯಾಣಿಕ್ಕೆ ಅವಕಾಶ ನೀಡಲಾಗಿತ್ತು.ಆದರೆ ಪ್ರಸ್ತುತ ಘನ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ ಎಂಬುದನ್ನು ಇಲಾಖೆ ಅದೇಶ ಹೊರಡಿಸಿದೆ.
    ಟ್ರಾಫಿಕ್ ಜಾಮ್ ಉಂಟಾದ ವೇಳೆ ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್
    ಎಸ್.ಐ.ಸುತೇಶ್
    ಎ.ಎಸ್.ಐ.ಗಳಾದ ವಿಜಯ್ ,ಸುರೇಶ್ ಪಡಾರ್,ಸಿಬ್ಬಂದಿಗಳಾದ ರಮೇಶ್, ಅಭಿಷೇಕ್ ಸಮಸ್ಯೆ ನಿವಾರಿಸಲು ಹರಸಾಹಸ ಪಟ್ಟರು. ಪೋಲೀಸರು ಕ್ರೇನ್ ತರಿಸಿ ಬಸ್ ನ್ನು ಸ್ಥಳದಿಂದ ತೆರವುಗೊಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply