Connect with us

  BANTWAL

  ಬಂಟ್ವಾಳ : ಹೊಸ ನ್ಯಾಯಾಲಯ ಸಂಕೀರ್ಣ- ವಕೀಲರ ಭವನ ನಿರ್ಮಾಣ- ಸ್ಥಳ ಪರಿಶೀಲಿಸಿದ ಜಸ್ಟಿಸ್ ಬಿ. ಎಂ. ಶ್ಯಾಮ್ ಪ್ರಸಾದ್

  ಬಂಟ್ವಾಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣದ ಜೊತೆಗೆ ವಕೀಲರ ಭವನದ ಕಾಮಗಾರಿಯ ಪೂರ್ವಭಾವಿ ಸ್ಥಳ ಪರಿಶೀಲನೆಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಜಸ್ಟಿಸ್ ಬಿ. ಎಂ. ಶ್ಯಾಮ್ ಪ್ರಸಾದ್ ರವರು ಬಂಟ್ವಾಳ ನ್ಯಾಯಾಲಯಕ್ಕೆ ಬುಧವಾರ ಆಗಮಿಸಿದ್ದರು.

  ಬಂಟ್ವಾಳ : ಬಂಟ್ವಾಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣದ ಜೊತೆಗೆ ವಕೀಲರ ಭವನದ ಕಾಮಗಾರಿಯ ಪೂರ್ವಭಾವಿ ಸ್ಥಳ ಪರಿಶೀಲನೆಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಜಸ್ಟಿಸ್ ಬಿ. ಎಂ. ಶ್ಯಾಮ್ ಪ್ರಸಾದ್ ರವರು ಬಂಟ್ವಾಳ ನ್ಯಾಯಾಲಯಕ್ಕೆ ಬುಧವಾರ ಆಗಮಿಸಿದ್ದರು.

  ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟಿಸ್ ಎಸ್. ವಿಶ್ವಜಿತ್ ಶೆಟ್ಟಿ, ನ್ಯಾಯಾಲಯ ಕಟ್ಟಡಗಳ ಮೂಲ ಸೌಕರ್ಯ ಮತ್ತು ನಿರ್ವಹಣಾ ಮುಖ್ಯಸ್ಥರು ಹಾಗೂ ನ್ಯಾಯಾಧೀಶರಾದ ಗೌರವಾನ್ವಿತ ಚಂದ್ರಕಲಾ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ ಜೋಶಿ, ಬಂಟ್ವಾಳದ ನ್ಯಾಯಾಧೀಶರುಗಳಾದ ಶ್ರೀಮತಿ ಭಾಗ್ಯಮ್ಮ, ಚಂದ್ರಶೇಖರ ವೈ ತಳವಾರ, ಕೃಷ್ಣಮೂರ್ತಿ. ಎನ್ ರವರುಗಳು ಉಪಸ್ಥಿತರಿದ್ದರು.

  ವಕೀಲರ ಸಂಘ (ರಿ), ಬಂಟ್ವಾಳದ ಅಧ್ಯಕ್ಷರಾದ ರಿಚರ್ಡ್ ಕೋಸ್ತಾ ಎಂ. ರವರು ಗೌರವಾನ್ವಿತ ನ್ಯಾಯಾಧೀಶರುಗಳನ್ನು ಬರಮಾಡಿಕೊಡು ಸ್ವಾಗತಿಸಿದರು.

  ವಕೀಲರ ಸಂಘ(ರಿ),ಬಂಟ್ವಾಳದ ವತಿಯಿಂದ ಗೌರವಾನ್ವಿತ ನ್ಯಾಯಾಧೀಶರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

  ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಜಸ್ಟಿಸ್ ಬಿ. ಎಂ. ಶ್ಯಾಮ್ ಪ್ರಸಾದ್ ರವರು ಮಾತನಾಡಿ, ಅತೀ ಶೀಘ್ರದಲ್ಲಿ ವಕೀಲರ ಸಂಘ (ರಿ) ಬಂಟ್ವಾಳದ ವಕೀಲರ ಕನಸು, ವಕೀಲರ ಭವನದ ಜೊತೆಗೆ ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿ ಪ್ರಾರಂಭ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.

  ಸದ್ರಿ ಕಾಮಗಾರಿಗೆ ವಕೀಲರ ಸಂಘ (ರಿ) ಬಂಟ್ವಾಳದ ಎಲ್ಲಾ ಸದಸ್ಯರು ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.

  ಈ ಕಾರ್ಯಕ್ರಮದಲ್ಲಿ ವಕೀಲರ ಸಂಘ (ರಿ), ಬಂಟ್ವಾಳದ ಪದಾಧಿಕಾರಿಗಳು ಹಾಗೂ ಎಲ್ಲಾ ಹಿರಿಯ-ಕಿರಿಯ ವಕೀಲ ಮಿತ್ರರು ಉಪಸ್ಥಿತರಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply